ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬಿಡಿ, ಗೇಲ್‌ಗೆ ಆರ್‌ಸಿಬಿ ಹಾಲ್‌ ಆಫ್‌ ಫೇಮ್ ಗೌರವ

Last Updated 17 ಮೇ 2022, 18:35 IST
ಅಕ್ಷರ ಗಾತ್ರ

ಮುಂಬೈ: ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾಲ್‌ ಆಫ್‌ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಆರ್‌ಸಿಬಿ ಹಾಲ್‌ ಆಫ್‌ ಫೇಮ್‌ ಸೇರಿದ ಮೊದಲ ಆಟಗಾರರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ತಂಡದ ನಿಕಟಪೂರ್ವ ನಾಯಕ ವಿರಾಟ್ ಕೊಹ್ಲಿ ಈ ವಿಷಯವನ್ನು ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಬರೆದಿದ್ದಾರೆ.

‘ಕ್ರಿಕೆಟ್‌ಗೆ ಹೊಸ ಸ್ವರೂಪ ಕೊಟ್ಟ ಶ್ರೇಯ ಎಬಿ ಡಿವಿಲಿಯರ್ಸ್‌ಗೆ ಸಲ್ಲುತ್ತದೆ. ಎಬಿಡಿಯ ಪ್ರಯೋಗಶೀಲತೆ, ದಿಟ್ಟತನ ಮತ್ತು ಕ್ರೀಡಾಮನೋಭಾವ ಅನುಕರಣೀಯ. ಆರ್‌ಸಿಬಿಗೆ ಪ್ಲೇ ಬೋಲ್ಡ್ ಎಂಬ ತತ್ವ ತಂದಿದ್ದು ಅವರೇ’ ಎಂದು ಕೊಹ್ಲಿ ಉಲ್ಲೇಖಿಸಿದ್ದಾರೆ.

‘ಇಬ್ಬರೂ ಆಟಗಾರರನ್ನು ಹಾಲ್‌ ಆಫ್‌ ಫೇಮ್‌ನಲ್ಲಿ ಸೇರ್ಪಡೆ ಮಾಡಿರುವುದು ಹೆಮ್ಮೆಯ ವಿಷಯ. ಅವರ ಆಟದ ವಿಡಿಯೊಗಳನ್ನು ನೋಡುವಾಗ ಪುಳಕವಾಗುತ್ತದೆ. ಐಪಿಎಲ್ ಯಶಸ್ವಿಯಾಗಿ ಬೆಳೆಯುವಲ್ಲಿ ಇವರಿಬ್ಬರ ಕಾಣಿಕೆ ದೊಡ್ಡದು’ ಎಂದು ಕೊಹ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT