ಗುರುವಾರ , ಜೂನ್ 24, 2021
30 °C

ಕ್ರಿಕೆಟಿಗ ಕಸ್ತೂರಿರಂಗನ್ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾಜಿ ಕ್ರಿಕೆಟಿಗ, ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ನಿರ್ಮಾತೃ, ಜಿ. ಕಸ್ತೂರಿರಂಗನ್ (89) ಬುಧವಾರ ಚಾಮರಾಜಪೇಟೆಯಲ್ಲಿರುವ ಅವರ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ  ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ.

1948 ರಿಂದ 63ರವರೆಗೆ ಮೈಸೂರು ರಾಜ್ಯ ತಂಡದಲ್ಲಿ ಅವರು ಮಧ್ಯಮವೇಗದ ಬೌಲರ್ ಆಗಿದ್ದರು. 1969ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ನಿರ್ಮಾಣದ ಉಸ್ತುವಾರಿ ವಹಿಸಿದ್ದರು. ನಂತರ 2001ರವರೆಗೆ ಅವರೇ ಕ್ಯುರೇಟರ್‌ ಕೂಡ ಆಗಿದ್ದರು.

ಗುಲಾಬಿ ಹೂವು ತಳಿಗಳ ಅಭಿವೃದ್ಧಿಯಲ್ಲಿಯೂ ಅವರು ತೊಡಗಿಕೊಂಡಿದ್ದರು. ಹಲವು ದೇಶಗಳಿಗೆ ಇವರ ತೋಟದಲ್ಲಿ ಬೆಳೆದ ಗುಲಾಬಿ ಹೂವುಗಳು ರಫ್ತಾಗುತ್ತವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು