ಶುಕ್ರವಾರ, ಮೇ 7, 2021
26 °C
ಪಂಜಾಬ್ ಕಿಂಗ್ಸ್‌ –ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿ ಇಂದು

ಮತ್ತೊಂದು ಜಯದ ಮೇಲೆ ರಾಹುಲ್ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್ (ಪಿಟಿಐ):  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರಿನ ಭರ್ಜರಿ ಜಯದಿಂದ ಪುಟಿದೆದ್ದಿರುವ ಕೆ.ಎಲ್. ರಾಹುಲ್ ಮತ್ತೊಂದು ಜಯದ ಮೇಲೆ ಕಣ್ಣಿಟ್ಟಿದ್ದಾರೆ.

ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ತಂಡವುನ್ನು ರಾಹುಲ್ ಬಳಗವು ಎದುರಿಸಲಿದೆ.  ರಿಷಭ್ ಪಂತ್ ಬಳಗವು 10 ಅಂಕಗಳನ್ನು ಗಳಿಸಿದ್ದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ತಂಡದ ಪೃಥ್ವಿ ಶಾ, ಶಿಖರ್ ಧವನ್, ರಿಷಭ್, ಶಿಮ್ರೊನ್ ಹೆಟ್ಮೆಯರ್ ಅಮೋಘ ಲಯದಲ್ಲಿದ್ದಾರೆ. ಅನುಭವಿ ಇಶಾಂತ್ ಶರ್ಮಾ, ಕಗಿಸೊ ರಬಾಡ, ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ಆವೇಶ್ ಖಾನ್ ಅವರಿಂದಾಗಿ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ.

ಪಂಜಾಬ್ ತಂಡದಲ್ಲಿ ನಾಯಕ ರಾಹುಲ್ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಕ್ರಿಸ್ ಗೇಲ್ ಕೂಡ ತಮ್ಮ ಆಟ ಆಡುತ್ತಿದ್ದಾರೆ. ಆದರೆ ನಿಕೊಲಸ್ ಪೂರನ್ ಫಾರ್ಮ್‌ನಲ್ಲಿ ಇಲ್ಲದಿರುವುದು ದೊಡ್ಡ ಕೊರತೆ. ಮಯಂಕ್ ಅಗರವಾಲ್ ಕೂಡ ಗಾಯಗೊಂಡಿರುವುದರಿಂದ ಪ್ರಭಸಿಮ್ರನ್ ಸಿಂಗ್ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಮತ್ತೊಂದು ಅವಕಾಶ ಗಿಟ್ಟಿಸಬಹುದು. ಬೌಲಿಂಗ್‌ನಲ್ಲಿ ಸ್ಪಿನ್ನರ್ ರವಿ ಬಿಷ್ಣೋಯಿ ಮತ್ತು ಹರ್‌ಪ್ರೀತ್ ಬ್ರಾರ್  ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಯಶಸ್ವಿಯಾಗಿದ್ದರು.  ಅದರಿಂದಾಗಿ ರಾಹುಲ್ ಆತ್ಮವಿಶ್ವಾಸ ಇಮ್ಮಡಿಸಿದೆ.

ಪಂಜಾಬ್ ತಂಡವು  ಈಗಾಗಲೇ ಏಳು ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ. ಪ್ಲೇ ಆಫ್ ಹಾದಿ ಸುಗಮವಾಗಬೇಕಾದರೆ ಇನ್ನುಳಿದಿರುವ ಪಂದ್ಯಗಳಲ್ಲಿ ಹೆಚ್ಚು ಜಯ ಗಳಿಸುವುದು ಸುರಕ್ಷಿತ.

ಮೊದಲ ಸುತ್ತಿನಲ್ಲಿ ರಾಹುಲ್ ಬಳಗವು ಡೆಲ್ಲಿ ಎದುರು ಸೋತಿತ್ತು. ಇದೀಗ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ತಂಡಕ್ಕಿದೆ.

ತಂಡಗಳು: ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ (ನಾಯಕ–ವಿಕೆಟ್‌ಕೀಪರ್),  ಪ್ರಭಸಿಮ್ರನ್ ಸಿಂಗ್ (ವಿಕೆಟ್‌ಕೀಪರ್), ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಶಾರೂಕ್ ಖಾನ್, ಹರಪ್ರೀತ್ ಬ್ರಾರ್, ಕ್ರಿಸ್ ಜೋರ್ಡಾನ್, ರೀಲಿ ಮೆರಿಡಿತ್, ರವಿ ಬಿಷ್ಣೋಯಿ, ಮೊಹಮ್ಮದ್ ಶಮಿ, ಮೊಯಿಸೆಸ್ ಹೆನ್ರಿಕ್ಸ್‌, ಮಯಂಕ್ ಅಗರವಾಲ್, ಮನದೀಪ್ ಸಿಂಗ್ ಡೇವಿಡ್ ಮಲಾನ್,  ಮುರುಗನ್ ಅಶ್ವಿನ್, ಜೇ ರಿಚರ್ಡ್ಸನ್, ಇಶಾನ್ ಪೊರೆಲ್, ಆರ್ಷದೀಪ್ ಸಿಂಗ್, ಸರ್ಫರಾಜ್ ಖಾನ್.

ಡೆಲ್ಲಿ ಕ್ಯಾಪಿಟಲ್ಸ್‌: ರಿಷಭ್ ಪಂತ್ (ನಾಯಕ–ವಿಕೆಟ್‌ಕೀಪರ್), ಪೃಥ್ವಿ ಶಾ, ಶಿಖರ್ ಧವನ್, ಮಾರ್ಕಸ್ ಸ್ಟೋಯಿನಿಸ್, ಶಿಮ್ರೊನ್ ಹೆಟ್ಮೆಯರ್, ಸ್ಟೀವ್ ಸ್ಮಿತ್, ಅಕ್ಷರ್ ಪಟೇಲ್, ಲಲಿತ್ ಯಾದವ್ ಕಗಿಸೊ ರಬಾಡ, ಇಶಾಂತ್ ಶರ್ಮಾ, ಆವೇಶ್ ಖಾನ್, ಅಮಿತ್ ಮಿಶ್ರಾ, ಉಮೇಶ್ ಯಾದವ್, ಕ್ರಿಸ್ ವೋಕ್ಸ್‌, ಅನಿರುದ್ಧ ಜೋಶಿ, ಸ್ಯಾಮ್ ಬಿಲಿಂಗ್ಸ್, ಶಮ್ಸ್ ಮುಲಾನಿ.  

 ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು