ದುಬೈ: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮಂಗಳವಾರದ ಪಂದ್ಯದಲ್ಲಿ ಸೆಣಸಲಿದ್ದು ಡೆಲ್ಲಿ ಅಗ್ರ ಸ್ಥಾನಕ್ಕೇರಲು ಪ್ರಯತ್ನಿಸಲಿದೆ. ಸನ್ರೈಸರ್ಸ್ಗೆ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯದಲ್ಲಿ ಜಯ ಅನಿವಾರ್ಯ. ಹೀಗಾಗಿ ಪ್ರಬಲ ಹೋರಾಟ ಕಂಡುಬರುವ ಸಾಧ್ಯತೆ ಇದೆ.

ಉತ್ತಮ ಆಟದ ಮೂಲಕ ನಾಗಾಲೋಟ ಓಡುತ್ತಿದ್ದ ಡೆಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಕೋಲ್ಕತ್ತ ನೈಟ್ ರೈಡರ್ಸ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ಎದುರು ಸೋತು ನಿರಾಸೆಗೆ ಒಳಗಾಗಿದೆ. ಆದ್ದರಿಂದ ಜಯದ ಲಯಕ್ಕೆ ಮರಳಲು ಮತ್ತು ಎರಡು ಪಾಯಿಂಟ್ಗಳೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮಂಗಳವಾರ ಪ್ರಯತ್ನಿಸಲಿದೆ.

11 ಪಂದ್ಯಗಳಿಂದ ಎಂಟು ಪಾಯಿಂಟ್ಗಳನ್ನು ಕಲೆ ಹಾಕಿರುವ ಡೇವಿಡ್ ವಾರ್ನರ್ ಬಳಗ ಇಲ್ಲಿ ಎರಡು ಪಾಯಿಂಟ್ಗಳನ್ನು ಗಳಿಸಿ ಮತ್ತೆ ಉಳಿದ ಎರಡು ಪಂದ್ಯಗಳಲ್ಲೂ ಗೆದ್ದರೆ ಪ್ಲೇಆಫ್ಗೇರುವ ಸಾಧ್ಯತೆಗಳು ಇವೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಅತ್ಯುತ್ತಮ ಬ್ಯಾಟಿಂಗ್ ಬಳಗವನ್ನು ಹೊಂದಿದ್ದು ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ತಂಡದ ಯಾವ ವಿಭಾಗವೂ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗಿಲ್ಲ. ಮೊದಲ ಎಂಟು ಪಂದ್ಯಗಳಲ್ಲಿ ಸಾಂಘಿಕವಾಗಿ ತಂಡ ಹೋರಾಡಿದ್ದು ಪ್ರತಿಯೊಬ್ಬರೂ ಅತ್ಯುತ್ತಮ ಕಾಣಿಕೆ ನೀಡುತ್ತ ಬಂದಿದ್ದಾರೆ. ಆದರೆ ಹಿಂದಿನ ಮೂರು ಪಂದ್ಯಗಳಲ್ಲಿ ಶಿಖರ್ ಧವನ್ ಹೊರತುಪಡಿಸಿ ಉಳಿದ ಬ್ಯಾಟ್ಸ್ಮನ್ಗಳು ಅಸ್ಥಿರ ಪ್ರದರ್ನಶ ನೀಡಿದ್ದಾರೆ. ಇದು ತಂಡವನ್ನು ಕಾಡುವ ಸಮಸ್ಯೆ. ಚೆನ್ನೈ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯಗಳಲ್ಲಿ ಸತತ ಶತಕ ಸಿಡಿಸಿದ ಧವನ್ ಈಗ ಭರವಸೆಯಲ್ಲಿದ್ದಾರೆ.

ಕೋಲ್ಕತ್ತ ಎದುರಿನ ಪಂದ್ಯದಲ್ಲಿ 195 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ಡೆಲ್ಲಿ 135 ರನ್ಗಳನ್ನಷ್ಟೇ ಗಳಿಸಿತ್ತು. ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಸತತ ವೈಫಲ್ಯ ಕಂಡಿದ್ದಾರೆ. ಅಜಿಂಕ್ಯ ರಹಾನೆ ಕೂಡ ಮಿಂಚುತ್ತಿಲ್ಲ. ರಿಷಭ್ ಪಂತ್ ಮತ್ತು ಶಿಮ್ರಾನ್ ಹೆಟ್ಮೆಯರ್ ರನ್ ಗಳಿಸಲು ಪರದಾಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾದ ಬೌಲರ್ಗಳಾದ ಕಗಿಸೊ ರಬಾಡ (23 ವಿಕೆಟ್) ಮತ್ತುಆ್ಯನ್ರಿಕ್ ನಾರ್ಕಿಯ (14 ವಿಕೆಟ್) ಅಮೋಘ ದಾಳಿ ಸಂಘಟಿಸುತ್ತಿದ್ದು ಎದುರಾಳಿ ತಂಡಗಳ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಾಗಿದ್ದಾರೆ. ತುಷಾರ್ ದೇಶಪಾಂಡೆ ಮತ್ತು ರವಿಚಂದ್ರನ್ ಅಶ್ವಿನ್ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಅಕ್ಷರ್ ಪಟೇಲ್ ಬ್ಯಾಟಿಂಗ್ನಲ್ಲೂ ಬೌಲಿಂಗ್ನಲ್ಲೂ ಗಮನ ಸೆಳೆಯುತ್ತಿದ್ದಾರೆ.

ಸಂಕಷ್ಟದಲ್ಲಿ ಸನ್ರೈಸರ್ಸ್

ಉತ್ತಮ ಆಟಗಾರರನ್ನು ಹೊಂದಿದ್ದರೂ ಸನ್ರೈಸರ್ಸ್ಗೆ ಕೆಲವು ಪಂದ್ಯಗಳಲ್ಲಿ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಗಳಿಸಿದ ಸಾಧಾರಣ ಮೊತ್ತ (126) ಕೂಡ ಬೆನ್ನತ್ತಿ ಗೆಲುವು ಸಾಧಿಸಲು ಆ ತಂಡಕ್ಕೆ ಸಾಧ್ಯವಾಗಲಿಲ್ಲ. ಒಂದು ಎಸೆತ ಬಾಕಿ ಇರುವಾಗ ತಂಡ 114 ರನ್ಗಳಿಗೆ ಆಲೌಟಾಗಿತ್ತು. ಆರಂಭಿಕ ಬ್ಯಾಟ್ಸ್ಮನ್ಗಳಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೆಸ್ಟೊ ಅವರ ವಿಕೆಟ್ ಉರುಳಿದ ನಂತರ ತಂಡ ದಿಢೀರ್ ಪತನ ಕಂಡಿತ್ತು. ಕೊನೆಯ ಎರಡು ಓವರ್ಗಳಲ್ಲಿ ತಂಡದ ಐದು ವಿಕೆಟ್ಗಳು ಉರುಳಿದ್ದವು.

ಬೆಸ್ಟೊ, ವಾರ್ನರ್ ಮತ್ತು ಮನೀಷ್ ಪಾಂಡೆ ಅವರ ಮೇಲೆ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣ ಅವಲಂಬಿತವಾಗಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಉತ್ತಮ ಸಾಮರ್ಥ್ಯ ತೋರಿದ್ದ ವಿಜಯಶಂಕರ್ ಅವರು ಕಿಂಗ್ಸ್ ಇಲೆವನ್ ಎದುರಿನ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದರು. ಜೇಸನ್ ಹೋಲ್ಡರ್ ಬಂದ ನಂತರ ಬೌಲಿಂಗ್ ವಿಭಾಗ ಬಲ ಪಡೆದುಕೊಂಡಿದ್ದು ಉಳಿದವರು ಲಯ ಕಂಡುಕೊಳ್ಳಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.