ಭಾನುವಾರ, ಮೇ 31, 2020
27 °C
ಗುತ್ತಿಗೆಯಿಂದ ಕೈಬಿಟ್ಟಿದ್ದಕ್ಕೆ ಅಸಮಾಧಾನ?

ಮಿಸ್ಬಾ ವಾಟ್ಸ್‌ಆ್ಯಪ್‌ ಗ್ರೂಪ್‌ ಕ್ವಿಟ್‌ ಮಾಡಿದ ಆಮಿರ್‌, ಹಸನ್‌

ಪಿಟಿಐ Updated:

ಅಕ್ಷರ ಗಾತ್ರ : | |

ಕರಾಚಿ: ಕೇಂದ್ರಿಯ ಗುತ್ತಿಗೆಯಿಂದ ಕೈಬಿಟ್ಟಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್‌ ತಂಡದ ವೇಗಿಗಳಾದ ಮೊಹಮ್ಮದ್‌ ಆಮೀರ್‌ ಮತ್ತು ಹಸನ್‌ ಅಲಿ ಅವರು ಮುಖ್ಯ ಕೋಚ್‌ ಮತ್ತು ಮುಖ್ಯ ಆಯ್ಕೆಗಾರ ಮಿಸ್ಬಾ– ಉಲ್‌– ಹಕ್‌ ಅವರ ವಾಟ್ಸ್‌ಆ್ಯಪ್‌ ಗ್ರೂಪ್‌ ಕ್ವಿಟ್‌ ಮಾಡಿದ್ದಾರೆ.

ಫಿಟ್ನೆಸ್‌ ಮತ್ತು ತರಬೇತಿ ಸಂಬಂಧ ಸಲಹೆ ನೀಡಲು ಮಿಸ್ಬಾ ಈ ಗ್ರೂಪ್‌ ಆರಂಭಿಸಿದ್ದರು. ಪಾಕ್‌ ಕ್ರಿಕೆಟ್‌ ಮಂಡಳಿ ಈ ವಿಷಯಕ್ಕೆ ಅಷ್ಟೇನೂ ಮಹತ್ವ ನೀಡಿಲ್ಲ. ಆದರೆ ದೇಶದಲ್ಲಿ ಇದು ಚರ್ಚೆಗೆ ಕಾರಣವಾಗಿದೆ.

ಗುತ್ತಿಗೆ ನೀಡದಿದ್ದರೆ ಆಟಗಾರರು ಗ್ರೂಪ್‌ನಿಂದ ಹೊರಬರುವುದು ಸಾಮಾನ್ಯ ಎಂದು ಮಂಡಳಿಯ ಮೂಲವೊಂದು ತಿಳಿಸಿದೆ. ಆದರೆ, ‘ಗುತ್ತಿಗೆಯಿಂದ ಕೈಬಿಟ್ಟ ಕೆಲವರು ಗ್ರೂಪ್‌ನಲ್ಲಿ ಮುಂದುವರಿದಿದ್ದಾರೆ’ ಎಂದು ಟೀಕಾಕಾರರು ಬೊಟ್ಟುಮಾಡಿದ್ದಾರೆ.

‘ಒಂದಂತೂ ಸ್ಪಷ್ಟ. ಪಾಕ್‌ ಮಂಡಳಿ ಗುತ್ತಿಗೆಯಿಂದ ಕೈಬಿಟ್ಟಿರುವುದರಿಂದ ಆಮೀರ್ ಮತ್ತು ಹಸಬ್‌ ಅಸಂತುಷ್ಟರಾಗಿದ್ದಾರೆ’ ಎಂದು ಮಾಜಿ ಟೆಸ್ಟ್‌ ಆಟಗಾರರೊಬ್ಬರು ತಿಳಿಸಿದ್ದಾರೆ.

‘ಆದರೆ ಹಸನ್‌ ಗ್ರೂಪ್‌ನಿಂದ ಹೊರಹೋಗಿದ್ದು ವಿಚಿತ್ರ. ಅವರು ದೈಹಿಕ ಕ್ಷಮತೆ ಹೊಂದಿಲ್ಲ. ಜೊತೆಗೆ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ಗುತ್ತಿಗೆಯಿಂದ ಕೈಬಿಟ್ಟರೂ, ಎಡಗೈ ವೇಗಿ ವಹಾಬ್‌ ರಿಯಾಜ್‌ ಗ್ರೂಪ್‌ನಲ್ಲೇ ಇದ್ದಾರೆ. ಮಂಡಳಿಯ ಇತರ ತರಬೇತುದಾರರ ಜೊತೆಗೂಡಿ ಮಿಸ್ಬಾ, ಆಟಗಾರರೊಂದಿಗೆ ಸಂಪರ್ಕ ಹೊಂದಲು ಈ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿದ್ದರು.

ಪಾಕ್‌ ಕ್ರಿಕೆಟ್‌ ಮಂಡಳಿ, ಇತ್ತೀಚೆಗೆ 18 ಮಂದಿ ಆಟಗಾರರನ್ನು ಮಾತ್ರ ಕೇಂದ್ರಿಯ ಗುತ್ತಿಗೆಯಲ್ಲಿ ಉಳಿಸಿಕೊಂಡಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು