ಭಾನುವಾರ, ಏಪ್ರಿಲ್ 5, 2020
19 °C

ಚೆನ್ನೈನಿಂದ ರಾಂಚಿಗೆ ಮರಳಿದ ಮಹೇಂದ್ರ ಸಿಂಗ್ ಧೋನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಕೊರೊನಾ ವೈರಸ್‌ ಭೀತಿಯಿಂದಾಗಿ  ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಮುಂದೂಡಲಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರಸಿಂಗ್ ತಮ್ಮ ತವರೂರು ರಾಂಚಿಗೆ ಮರಳಿದ್ದಾರೆ.

ಮಾರ್ಚ್ 29ರಿಂದ ಆರಂಭವಾಗಲಿದ್ದ ಟೂರ್ನಿಯನ್ನು  ಬಿಸಿಸಿಐ ಏಪ್ರಿಲ್ 15ರವರೆಗೆ ಮುಂದೂಡಿದೆ. ಈಚೆಗೆ ಇಲ್ಲಿ ಆರಂಭವಾಗಿದ್ದ ಸಿಎಸ್‌ಕೆ ತಂಡದ ಅಭ್ಯಾಸ ಶಿಬಿರದಲ್ಲಿ ಧೋನಿ ಕೂಡ ಭಾಗವಹಿಸಿದ್ದರು. ಭಾನುವಾರ ಅಭ್ಯಾಸಕ್ಕೆ ಬಂದ ಅವರನ್ನು ಸ್ಥಳದಲ್ಲಿದ್ದ ಅಭಿಮಾನಿಗಳು ಹುರಿದುಂಬಿಸಿದರು.

ಕ್ರೀಡಾಂಗಣವನ್ನು ತೊರೆಯುವ ಮುನ್ನ ಧೋನಿಯವರು ಅಭಿಮಾನಿಗಳ ಆಟೋಗ್ರಾಫ್‌ಗೆ ಹಸ್ತಾಕ್ಷರ ಹಾಕಿದರು. ಕೆಲವರೊಂದಿಗೆ ಮಾತನಾಡಿದರು. 

ಸಿಎಸ್‌ಕೆ ಫ್ರ್ಯಾಂಚೈಸ್‌ನ ಟ್ವಿಟರ್‌ನಲ್ಲಿ ಧೋನಿ ತಮ್ಮ ತವರಿಗೆ ಮರಳುತ್ತಿರುವ ವಿಡಿಯೋ ಹಾಕಿದೆ. ‘ಇದು (ಚೆನ್ನೈ) ನಿಮ್ಮ ತವರುಮನೆಯಾಗಿದೆ. ತಾಲಾ ಧೋನಿ ನಿಮಗೆ ಕೃತಜ್ಞತೆಗಳು’ ಎಂದು ಬರೆದಿದೆ.

38 ವರ್ಷದ ಧೋನಿ ಅವರಿಗೆ ಈ ಬಾರಿಯ ಐಪಿಎಲ್‌ ಬಹುಏಕ ಕೊನೆಯದು ಎಂದು ಹೇಳಲಾಗುತ್ತಿದೆ. ಹೋದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತವು ಸೆಮಿಫೈನಲ್‌ನಲ್ಲಿ ಸೋತಿತ್ತು. ಆ ಪಂದ್ಯದ ನಂತರ ಅವರು ತಂಡಕ್ಕೆ ಮರಳಿಲ್ಲ.

ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಆಡಬೇಕಾದರೆ, ಐಪಿಎಲ್‌ನಲ್ಲಿ ಅವರು ತೋರುವ ಆಟ ಮತ್ತು ಫಿಟ್‌ನೆಸ್‌ ಸಾಮರ್ಥ್ಯವು ಪ್ರಮುಖವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು