ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಕ್ರಿಕೆಟಿಗರ ಅನುಭವ ವ್ಯರ್ಥವಾಗದಿರಲಿ: ರಾಹುಲ್ ದ್ರಾವಿಡ್

ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಸಲಹೆ
Last Updated 12 ಆಗಸ್ಟ್ 2020, 15:37 IST
ಅಕ್ಷರ ಗಾತ್ರ

ಮುಂಬೈ: ಮಾಜಿ ಕ್ರಿಕೆಟಿಗರ ಅನುಭವನ್ನು ಎಷ್ಟು ಸಾಧ್ಯವೋ ಅಷ್ಟು ಬಳಸಿಕೊಂಡು ಕ್ರಿಕೆಟ್‌ ಆಡಳಿತ ಮತ್ತು ಚಟುವಟಿಕೆಗಳಿಗೆ ಶಕ್ತಿ ತುಂಬಬೇಕು. ಹಿರಿಯರ ಜ್ಞಾನ ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸಲಹೆ ನೀಡಿದರು.

ಬುಧವಾರ ಸಂಜೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಯ) ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಕಾರ್ಯದರ್ಶಿಗಳು, ಕ್ರಿಕೆಟ್ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರು, ಎನ್‌ಸಿಎದ ಶಿಕ್ಷಣ ವಿಭಾಗದ ಮುಖ್ಯಸ್ಥ ಸುಜಿತ್ ಸೋಮಸುಂದರ ಮತ್ತು ಟ್ರೇನರ್ ಆಶಿಶ್ ಕೌಶಿಕ್ ಹಾಜರಿದ್ದರು. ಆಟಗಾರರ ಫಿಟ್‌ನೆಸ್ ಮತ್ತು ಮನೋದೈಹಿಕ ಸಮಸ್ಯೆಗಳ ಪರಿಹಾರ ಸೂತ್ರಗಳ ಕುರಿತ ವಿಷಯದಲ್ಲಿ ಸಂವಾದ ನಡೆಯಿತು.

ವೆಬಿನಾರ್ ನಂತರ ಮಾಹಿತಿ ನೀಡಿದ ರಾಜ್ಯ ಸಂಸ್ಥೆಯೊಂದರ ಕಾರ್ಯದರ್ಶಿ, ’ರಾಹುಲ್ ಅವರು ಈ ವಿಷಯವನ್ನು ಕಡ್ಡಾಯಗೊಳಿಸಬೇಕೆಂದು ಹೇಳಿಲ್ಲ. ಆದರೆ, ಮಾಜಿ ಆಟಗಾರರ ಅನುಭವ ಮತ್ತು ಜ್ಞಾನದ ಸದ್ಭಳಕೆ ಮಾಡಿಕೊಳ್ಳಬೇಕು. ಅದರಿಂದ ಕ್ರಿಕೆಟ್‌ನ ಹಲವು ವಿಭಾಗಗಳನ್ನು ಉತ್ತಮಗೊಳಿಸಬೇಕೆಂದು ಸಲಹೆ ನೀಡಿದ್ದಾರೆ‘ ಎಂದರು.

’ಕ್ರಿಕೆಟ್ ಆಡಳಿತ ಮತ್ತು ಬೆಳವಣಿಗೆಯಲ್ಲಿ ಹಿರಿಯರ ಒಳಗೊಳ್ಳುವಿಕೆ ಇದ್ದರೆ ಉಪಯುಕ್ತವಾಗುತ್ತದೆಯೆಂದು ಅಭಿಪ್ರಾಯವ್ಯಕ್ತಪಡಿಡಿಸಿದರು‘ ಎಂದು ತಿಳಿಸಿದರು.

’ಇವತ್ತಿನ ಸಮಯದಲ್ಲಿ 25–30 ಆಟಗಾರರು ಏಕಕಾಲದಲ್ಲಿ ತರಬೇತಿ ಪಡೆಯುತ್ತಾರೆ. ಆಗ ರಾಜ್ಯ ತಂಡಗಳ ಟ್ರೇನರ್‌ಗಳು ಮತ್ತು ಫಿಸಿಯೊಗಳು ಆಟಗಾರರಿಗೆ ಉತ್ತಮ ತಂತ್ರಜ್ಞಾನಗಳ ಮೂಲಕ ನೆರವು ನೀಡಬೇಕು. ಕೆಲವರಿಗೆ ನೇರವಾಗಿಯೂ ತರಬೇತಿ ನೀಡಲು ಅವಕಾಶವಾಗಬೇಕೆಂದು ಸುಜಿತ್ ಸೋಮಸುಂದರ ಅಭಿಪ್ರಾಯಪಟ್ಟಿದ್ದಾರೆ‘ ಎಂದು ಪದಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT