ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಪ್ರಸಿದ್ಧ ಕ್ರಿಕೆಟಿಗ ಫಾಫ್ ಡು ಪ್ಲೆಸಿ ಅವರು ದುರ್ಬಲ ಮಕ್ಕಳ ಸಂಕಷ್ಟಕ್ಕೆ ಮಿಡಿದಿದ್ದಾರೆ.

ಈ ಮಕ್ಕಳಿಗೆ ನೆರವಾಗುವ ಸಲುವಾಗಿ ಅವರು ತಾವು ಬಳಸುತ್ತಿದ್ದ ಬ್ಯಾಟ್ ಹಾಗೂ ಏಕದಿನ ಮಾದರಿಯ ಪಂದ್ಯವೊಂದರಲ್ಲಿ ಧರಿಸಿದ್ದ ಗುಲಾಬಿ ವರ್ಣದ ಜೆರ್ಸಿಯನ್ನು ದೇಣಿಗೆ ನೀಡಿದ್ದಾರೆ.

‘ಕೊರೊನಾ ಬಿಕ್ಕಟ್ಟಿನಿಂದಾಗಿ ಈಗ ಎಲ್ಲರೂ ಸಂದಿಗ್ಧತೆಗೆ ಸಿಲುಕಿದ್ದಾರೆ. ಈ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದು ನಮ್ಮ ಕರ್ತವ್ಯ. ದಕ್ಷಿಣ ಆಫ್ರಿಕಾದ ಮತ್ತೊಬ್ಬ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಹೊಸ ಬ್ಯಾಟ್ ಹಾಗೂ 2016ರಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ ಏಕದಿನ ಪಂದ್ಯದ ವೇಳೆ ಧರಿಸಿದ್ದ ಗುಲಾಬಿ ವರ್ಣದ ಜೆರ್ಸಿಯನ್ನು ದೇಣಿಗೆ ನೀಡುತ್ತಿದ್ದೇನೆ. ಇವುಗಳನ್ನು ಆಫ್ರಿಕಾದ ವೆಬ್‌ಸೈಟ್‌ನಲ್ಲಿ ಹರಾಜಿಗಿಡಲಾಗುತ್ತದೆ’ ಎಂದು ಡು ಪ್ಲೆಸಿ ಅವರು ಶನಿವಾರ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

‘ಬ್ಯಾಟ್ ಮತ್ತು ಜೆರ್ಸಿಯ ಹರಾಜಿನಿಂದ ಸಂಗ್ರಹವಾಗುವ ಮೊತ್ತವನ್ನು ಹಿಲ್‌ಸಂಗ್ ಆಫ್ರಿಕಾ ಫೌಂಡೇಷನ್‌ಗೆ ನೀಡಲಾಗುತ್ತದೆ. ದುರ್ಬಲ ಮಕ್ಕಳ ಸರ್ವತೋಮುಖ ಏಳಿಗಾಗಿ ಶ್ರಮಿಸುತ್ತಿರುವ ಈ ಸಂಸ್ಥೆಯು ಈ ಹಣವನ್ನು ಮಕ್ಕಳ ಹಸಿವು ನೀಗಿಸಲು ವಿನಿಯೋಗಿಸಲಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.