ಶುಕ್ರವಾರ, ಏಪ್ರಿಲ್ 10, 2020
19 °C

ಕೊರೊನಾ ಭೀತಿ: ಮೇ 28ರವರೆಗೆ ವೃತ್ತಿಪರ ಟೂರ್ನಿ ನಡೆಸದಿರಲು ಇಸಿಬಿ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಕೊರೊನಾ ಸೋಂಕು ಭೀತಿಯ ಕಾರಣ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಮೇ 28ರವರೆಗೆ ವೃತ್ತಿಪರ ಕ್ರಿಕೆಟ್‌ ಟೂರ್ನಿಗಳನ್ನು ನಡೆಸದಿರಲು ನಿರ್ಧರಿಸಿದೆ.

ಪ್ರಥಮ ದರ್ಜೆ ಕೌಂಟೀಸ್‌, ಮೆರಿಲ್‌ಬೋನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಹಾಗೂ ಪ್ರೊಫೆಷನಲ್‌ ಕ್ರಿಕೆಟರ್ಸ್‌ ಅಸೋಸಿಯೇಷನ್‌ಗಳೊಂದಿಗೆ (ಪಿಸಿಎ) ಚರ್ಚೆ ನಡೆಸಿದ ಬಳಿಕ ಇಸಿಬಿ ಈ ನಿರ್ಧಾರಕ್ಕೆ ಬಂದಿದೆ.

ಜೂನ್‌, ಜುಲೈ ಹಾಗೂ ಆಗಸ್ಟ್‌ನಲ್ಲಿ  ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿ, ಟಿ20 ಕಪ್‌ ಹಾಗೂ ಭಾರತ ಮತ್ತು ಇಂಗ್ಲೆಂಡ್‌ ಮಹಿಳಾ ತಂಡಗಳ ನಡುವೆ ನಡೆಯಬೇಕಿರುವ ಸರಣಿಗಳನ್ನೂ ಮುಂದಕ್ಕೆ ಹಾಕುವ ಬಗ್ಗೆ ಇಸಿಬಿ ಯೋಚಿಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು