ಮ್ಯಾಂಚೆಸ್ಟರ್ (ಪಿಟಿಐ):ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಮತ್ತು ಎಡಗೈ ಸ್ಪಿನ್ನರ್ ಜ್ಯಾಕ್ ಲೀಚ್ ಅವರು ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ.

ಇದೇ 10ರಂದು ಆರಂಭವಾಗವಾಲಿರುವ ಭಾರತದ ಎದುರಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಸೋಮವಾರ ಓವಲ್ನಲ್ಲಿ ಮುಕ್ತಾಯವಾದ ನಾಲ್ಕನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಪರಾಭವಗೊಂಡಿತ್ತು. ಅದರಿಂದಾಗಿ ಭಾರತ ತಂಡವು 2–1ರ ಮುನ್ನಡೆ ಸಾಧಿಸಿತು.

ಇದೀಗ ಸರಣಿಯನ್ನು ಸಮ ಮಾಡಿಕೊಳ್ಳುವುದೊಂದೇ ಇಂಗ್ಲೆಂಡ್ ಮುಂದಿರುವ ದಾರಿ. ಆದ್ದರಿಂದ ಕೊನೆಯ ಪಂದ್ಯವನ್ನು ಜಯಿಸಲೇಬೇಕಾದ ಒತ್ತಡದಲ್ಲಿದೆ. 2007ರಿಂದ ಇಲ್ಲಿಯವರೆಗೆ ಇಂಗ್ಲೆಂಡ್ ತಂಡವು ತವರಿನಲ್ಲಿ ಭಾರತದ ವಿರುದ್ಧ ಒಂದೂ ಟೆಸ್ಟ್ ಸರಣಿ ಸೋತಿಲ್ಲ.

ತಮ್ಮ ಪತ್ನಿಯು ಈಚೆಗೆ ಎರಡನೇ ಮಗುವಿಗೆ ಜನ್ಮ ನೀಡಿದ ಕಾರಣದಿಂದ ರಜೆ ಪಡೆದಿದ್ದ ಜೊಸ್ ಬಟ್ಲರ್ ನಾಲ್ಕನೇ ಪಂದ್ಯದಲ್ಲಿ ಆಡಿರಲಿಲ್ಲ. ಲೀಚ್ ಗಾಯದಿಂದ ಚೇತರಿಸಿಕೊಂಡು ಮರಳಿದ್ದಾರೆ.

ತಂಡ ಇಂತಿದೆ: ಜೋ ರೂಟ್ (ನಾಯಕ), ಮೋಯಿನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಜಾನಿ ಬೆಸ್ಟೊ, ರೊರಿ ಬರ್ನ್ಸ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಹಸೀಬ್ ಹಮೀದ್, ಡ್ಯಾನ್ ಲಾರೆನ್ಸ್, ಜ್ಯಾಕ್ ಲೀಚ್, ಡೇವಿಡ್ ಮಲಾನ್, ಕ್ರೇಗ್ ಓವರ್ಟನ್, ಒಲಿ ಪೊಪ್, ಒಲಿ ರಾಬಿನ್ಸನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.