ಲಂಡನ್: ಇಲ್ಲಿ ನಡೆಯುತ್ತಿರುವ ಭಾರತ ವಿರುದ್ದದ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನತ್ತ ಮುಖ ಮಾಡಿದೆ. ಎರಡನೇ ಇನಿಂಗ್ಸ್ನಲ್ಲಿ 374 ರನ್ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದ್ದು, ಕೊನೆಯ ದಿನ ಇಂಗ್ಲೆಂಡ್ ಗೆಲುವಿಗೆ 35 ರನ್ ಬೇಕಿದೆ.

ಇಂಗ್ಲೆಂಡ್ ಎದುರಿನ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಸಮ ಮಾಡಿಕೊಳ್ಳುವ ಭಾರತದ ಗುರಿಗೆ ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ಅವರು ಅಡ್ಡಿಯಾದರು.

374 ರನ್ಗಳ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ತಂಡದಲ್ಲಿ ಗೆಲುವಿನ ವಿಶ್ವಾಸ ಮೂಡಲು ಇವರಿಬ್ಬರ ಜೊತೆಯಾಟ ಕಾರಣವಾಯಿತು. ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ ಗಳಿಸಿದ 195 ರನ್ (211 ಎಸೆತ) ಗಳಿಸಿದ್ದರಿಂದ ಇಂಗ್ಲೆಂಡ್ ತಂಡವು ಚಹಾ ವಿರಾಮದ ವೇಳೆಗೆ 4ಕ್ಕೆ 317 ರನ್ ಗಳಿಸಿತು. ಗೆಲುವಿಗೆ ಇನ್ನು 57 ರನ್ಗಳಷ್ಟೇ ಬೇಕು. ಐದು ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡವು ಈಗಾಗಲೇ 2–1ರ ಮುನ್ನಡೆಯಲಿದೆ.

ಗುರಿ ಬೆನ್ನಟ್ಟಿದ ಹಾದಿಯಲ್ಲಿ ಇಂಗ್ಲೆಂಡ್ ತಂಡವು 106 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಇದರಿಂದಾಗಿ ಗಿಲ್ ಬಳಗದ ಉತ್ಸಾಹ ಮುಗಿಮುಟ್ಟಿತು. ಆದರೆ ಕ್ರೀಸ್ಗೆ ಬಂದ ಬ್ರೂಕ್ (111 ರನ್, 98ಎಸೆತ) ಅಕ್ಷರಶಃ ಟಿ20 ಮಾದರಿಯ ಬ್ಯಾಟಿಂಗ್ ಪ್ರದರ್ಶಿಸಿದರು.

ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್ ಅವರು ಹ್ಯಾರಿ ಬ್ರೂಕ್ ಅವರ ಕ್ಯಾಚ್ ಕೈಚೆಲ್ಲಿದ್ದು ದುಬಾರಿಯಾಯಿತು. ಏಕೆಂದರೆ; ಬ್ರೂಕ್ ಆ ಸಂದರ್ಭದಲ್ಲಿ 19 ರನ್ ಮಾತ್ರ ಗಳಿಸಿದ್ದರು. ಜೀವದಾನ ಸಿಕ್ಕ ನಂತರ ಎಲ್ಲ ಬೌಲರ್ಗಳಿಗೂ ಬೆವರಿಳಿಸಿದರು. ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್ಗಳಿಗೂ ಬ್ರೂಕ್ ಜಗ್ಗಲಿಲ್ಲ. ಇನ್ನೊಂದು ಬದಿಯಲ್ಲಿ ರೂಟ್ ತಮ್ಮ ಎಂದಿನ ಶಾಂತ ಮತ್ತು ಚೆಂದದ ಶೈಲಿಯ ಬ್ಯಾಟಿಂಗ್ ಮಾಡುತ್ತಿದ್ದರು. ಬ್ರೂಕ್ ಅವರು ಪ್ರಯೋಗಿಸುತ್ತಿದ್ದ ಪುಲ್, ಹುಕ್, ಡ್ರೈವ್ ಮತ್ತು ಫ್ಲಿಕ್ಗಳಿಗೆ ಚೆಂಡು ಬೌಂಡರಿ ಗೆರೆಯತ್ತ ಪದೇ ಪದೇ ಮುಖ ಮಾಡುತ್ತಿತ್ತು. ಭಾರತದ ಫೀಲ್ಡರ್ಗಳ ಕೆಲವು ಲೋಪಗಳೂ ಅವರಿಗೆ ಅನುಕೂಲವಾದವು. ಬ್ರೂಕ್ ಈ ಸರಣಿಯಲ್ಲಿ ಎರಡನೇ ಶತಕ ದಾಖಲಿಸಿದರು.

ಚಹಾ ವಿರಾಮಕ್ಕೆ ಸ್ವಲ್ಪ ಹೊತ್ತಿಗೆ ಮುನ್ನ ಆಕಾಶ್ ದೀಪ್ ಎಸೆತವನ್ನು ಮುನ್ನುಗ್ಗಿ ಹೊಡೆಯುವ ಯತ್ನದಲ್ಲಿ ಬ್ರೂಕ್ ಅವರು ಮಿಡ್ ಆಫ್ನಲ್ಲಿದ್ದ ಸಿರಾಜ್ ಅವರಿಗೆ ಕ್ಯಾಚ್ ಆದರು. ಇದರ ನಂತರ ರೂಟ್ ಅವರು ಇನಿಂಗ್ಸ್ ಹೊಣೆ ಹೊತ್ತುಕೊಂಡರು. ಜೊತೆಗೆ ತಮ್ಮ ಶತಕದತ್ತಲೂ ಹೆಜ್ಜೆ ಹಾಕಿದರು. ಸಿರಾಜ್ ಅವರ ಒಂದೇ ಓವರ್ನಲ್ಲಿ ಎರಡು ಬೌಂಡರಿ ಕೂಡ ಬಾರಿಸಿದರು.

ಆದರೆ ಭಾನುವಾರ ಬೆಳಿಗ್ಗೆಯ ಅವಧಿಯಲ್ಲಿ ಸಿರಾಜ್ ಬಹಳಷ್ಟು ಪರಿಣಾಮಕಾರಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಓಲಿ ಪೋಪ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು. ಇದಕ್ಕೂ ಮುನ್ನ ಕನ್ನಡಿಗ ಪ್ರಸಿದ್ಧಕೃಷ್ಣ ಅವರು ಬೆನ್ ಡಕೆಟ್ (54 ರನ್) ಅವರಿಗೆ ಪೆವಿಲಿಯನ್ ದಾರಿ ತೋರಿಸಿದ್ದರು. ಶನಿವಾರ ಸಂಜೆ ಅವರು ಜಾಕ್ ಕ್ರಾಲಿ ಅವರನ್ನು ಕ್ಲೀನ್ಬೌಲ್ಡ್ ಮಾಡಿದ್ದರು. ಇದರಿಂದಾಗಿ ಇಂಗ್ಲೆಂಡ್ ತಂಡವು ಊಟದ ವಿರಾಮಕ್ಕೆ 3ಕ್ಕೆ 164 ರನ್ ಗಳಿಸಿತ್ತು. ಆದರೆ ನಂತರದ ಅವಧಿಯಲ್ಲಿ ಗಿಲ್ ಬಳಗದ ಲೆಕ್ಕಾಚಾರಗಳು ತಲೆಕೆಳಗಾದವು. ಸುಲಭ ಗೆಲುವಿನ ಕನಸು ಕಠಿಣ ಹಾದಿಯಾಗಿ ಮಾರ್ಪಟ್ಟಿತು. ಅದಕ್ಕೆ ಕಾರಣವಾಗಿದ್ದ ಬ್ರೂಕ್ ಮತ್ತು ರೂಟ್ ಜೊತೆಯಾಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.