ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ ಕೋಚಿಂಗ್‌ ಬಳಗಕ್ಕೆ ಅಜರ್‌ ಮೆಹಮೂದ್‌ ಸೇರ್ಪಡೆ

Last Updated 19 ಆಗಸ್ಟ್ 2020, 9:17 IST
ಅಕ್ಷರ ಗಾತ್ರ

ಲಂಡನ್‌: ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಅಜರ್‌ ಮೆಹಮೂದ್‌ ಅವರನ್ನು ಇಂಗ್ಲೆಂಡ್‌ ತಂಡದ ಸಹಾಯಕ ಕೋಚ್ ಆಗಿ ನೇಮಿಸಲಾಗಿದೆ. ಪಾಕಿಸ್ತಾನ ವಿರುದ್ಧ ಆಗಸ್ಟ್‌ 28ರಿಂದ ನಡೆಯಲಿರುವ ಮೂರು ಟ್ವೆಂಟಿ–20 ಪಂದ್ಯಗಳಿಗೆ, ಆತಿಥೇಯ ಇಂಗ್ಲೆಂಡ್‌ ತಂಡ ಮೆಹಮೂದ್‌ ಅವರಿಂದ ತರಬೇತಿ ಪಡೆಯಲಿದೆ.

‘45 ವರ್ಷದ ಮೆಹಮೂದ್‌ ಅವರು‌ ತಂಡದ ಬೌಲಿಂಗ್‌ ಕೋಚ್‌ ಜಾನ್‌ ಲೂಯಿಸ್‌ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ‘ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್ ಕ್ರಿಕೆಟ್‌ ಮಂಡಳಿ (ಇಸಿಬಿ) ಮಂಗಳವಾರ ಹೇಳಿದೆ.

ಓಲ್ಡ್‌ ಟ್ರಾಫರ್ಡ್‌ನಲ್ಲಿ ಜೀವಸುರಕ್ಷಾ ವಾತಾವರಣದಲ್ಲಿ ಮೊದಲ ಟ್ವೆಂಟಿ–20 ಪಂದ್ಯ ನಡೆಯಲಿದೆ. ಸದ್ಯ ಬ್ರಿಟನ್‌ನ ನಾಗರಿಕತ್ವ ಪಡೆದಿರುವ ಮೆಹಮೂದ್‌, ಹೋದ ವರ್ಷ ಪಾಕಿಸ್ತಾನ ತಂಡದ ಕೋಚಿಂಗ್ ಬಳಗದಲ್ಲಿದ್ದರು.

ಮೂರು ಪಂದ್ಯಗಳ ಸರಣಿಗೆ ಇಂಗ್ಲೆಂಡ್‌ ತಂಡಕ್ಕೆಸದ್ಯ ಸಹಾಯಕ ಕೋಚ್‌ ಆಗಿರುವ ಗ್ರಹಾಂ ಥೋರ್ಪ್‌ ಅವರು ಮುಖ್ಯ ಕೋಚ್‌ ಆಗಿ, ಕ್ರಿಸ್‌ ಸಿಲ್ವರ್‌ವುಡ್ ಬದಲಿಗೆ ಕಾರ್ಯನಿರ್ವಹಿಸಲಿದ್ದಾರೆ. ಸಹಾಯಕ ಕೋಚ್‌ ಪಾಲ್‌ ಕಾಲಿಂಗ್‌ವುಡ್‌ಅವರಿಗೆ ನೆರವು ನೀಡಲಿದ್ದಾರೆ. ಮಾರ್ಕಸ್‌ ಟ್ರೆಸ್ಕೋಥಿಕ್‌ ಅವರು ಬ್ಯಾಟಿಂಗ್‌ ಕೋಚ್‌ ಆಗಿದ್ದು, ಜೇಮ್ಸ್‌ ಫಾಸ್ಟರ್‌ ವಿಕೆಟ್‌ ಕೀಪಿಂಗ್‌ ತರಬೇತಿ ನೀಡಲಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT