ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಪಿಎಲ್‌ನಿಂದ ಹಿಂದೆಸರಿದ ಹ್ಯಾರಿ ಬ್ರೂಕ್‌: ಕಾರಣವೇನು?

Published : 14 ಮಾರ್ಚ್ 2024, 14:29 IST
Last Updated : 14 ಮಾರ್ಚ್ 2024, 14:29 IST
ಫಾಲೋ ಮಾಡಿ
Comments

ಲಂಡನ್‌: ಇಂಗ್ಲೆಂಡ್‌ನ ಬ್ಯಾಟರ್‌ ಹ್ಯಾರಿ ಬ್ರೂಕ್ ಅವರು ತಮ್ಮ ಅಜ್ಜಿಯ ಸಾವಿನ ಕಾರಣದಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ.

ಬ್ರೂಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಸುಮಾರು ₹4 ಕೋಟಿ ಕೊಟ್ಟು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ‘ಮುಂಬರುವ ಐಪಿಎಲ್‌ನಲ್ಲಿ ನಾನು ಆಡುವುದಿಲ್ಲ ಎಂಬ ಕಠಿಣ ನಿರ್ಧಾರ ಕೈಗೊಂಡಿರುವುದನ್ನು ಖಚಿತಪಡಿಸಿರುವೆ’ ಎಂದು ಬ್ರೂಕ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

25 ವರ್ಷದ ಬ್ರೂಕ್ ಅವರು ವೈಯಕ್ತಿಕ ಕಾರಣ ನೀಡಿ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ತಂಡದಿಂದ ಹಿಂದೆಸರಿದಿದ್ದರು. ಅಜ್ಜಿಯ ಚಿಂತಾಜನಕ ಸ್ಥಿತಿಯ ಕಾರಣ ತಂಡದ ಜೊತೆ ಹೋಗಿರಲಿಲ್ಲ ಎಂಬುದನ್ನು ಈಗ ಬಹಿರಂಗಪಡಿಸಿದ್ದಾರೆ.

‘ಕಳೆದ ತಿಂಗಳು ಅಜ್ಜಿಯನ್ನು ಕಳೆದುಕೊಂಡೆ. ಅವರು ನನ್ನ ಪ್ರೀತಿಪಾತ್ರರು. ಇಡೀ ಬಾಲ್ಯವನ್ನು ಅವರ ಮನೆಯಲ್ಲೇ ಕಳೆದಿದ್ದೆ. ಜೀವನದ ಬಗ್ಗೆ ನನ್ನ ದೃಷ್ಟಿಕೋನ, ಕ್ರಿಕೆಟ್‌ ಬಗ್ಗೆ ಪ್ರೀತಿಯನ್ನು ರೂಪಿಸಿದವರು ಅವರು ಮತ್ತು ನನ್ನ ದಿವಂಗತ ಅಜ್ಜ’ ಎಂದು ಬರೆದಿದ್ದಾರೆ. ಈ ಸಂಕಷ್ಟದ ಸ್ಥಿತಿಯಲ್ಲಿ ನಾನು ಕುಟುಂಬದ ಜೊತೆ ಇರಬೇಕಾಗಿದೆ ಎಂದಿದ್ದಾರೆ.

ಕಳೆದ ವರ್ಷದ ಐಪಿಎಲ್‌ನಲ್ಲಿ ಅವರು ಸನ್‌ರೈಸರ್ಸ್‌ ಹೈದರಾಬಾದ್ ಪರ ಆಡಿದ್ದರು. ಅವರನ್ನು ಫ್ರಾಂಚೈಸಿಯು ಹರಾಜಿನ ವೇಳೆ ₹14 ಕೋಟಿಗೆ ಪಡೆದಿತ್ತು. ಆದರೆ ನಿರಾಶಾದಾಯಕ ಪ್ರದರ್ಶನದಿಂದ ಅವರನ್ನು ಈ ಬಾರಿಗೆ ಉಳಿಸಿಕೊಳ್ಳಲಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯವನ್ನು ಮಾರ್ಚ್‌ 23 ರಂದು ಪಂಜಾಬ್ ಕಿಂಗ್ಸ್ ಎದುರು ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT