ಬುಧವಾರ, ಜುಲೈ 28, 2021
29 °C

ಜುಲೈ 30ರಿಂದ ಇಂಗ್ಲೆಂಡ್‌–ಐರ್ಲೆಂಡ್‌ ಏಕದಿನ ಸರಣಿ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಇಂಗ್ಲೆಂಡ್‌ ತಂಡವು ಜುಲೈ 30ರಿಂದ ಐರ್ಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಆಡಲಿದೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಸೋಮವಾರ ಈ ವಿಷಯವನ್ನು ತಿಳಿಸಿದೆ.

ಐರ್ಲೆಂಡ್‌ ತಂಡವು ಇದೇ ತಿಂಗಳ 18ರಂದು ಇಂಗ್ಲೆಂಡ್‌ಗೆ ಬರಲಿದ್ದು, ತಂಡದ ಎಲ್ಲಾ ಆಟಗಾರರು ಸೌತಾಂಪ್ಟನ್‌ನಲ್ಲಿ ಸ್ವಯಂ ಪ್ರತ್ಯೇಕವಾಸದಲ್ಲಿರಲಿದ್ದಾರೆ. ಇಲ್ಲಿನ ಏಜಿಸ್‌ ಬೌಲ್‌ ಮೈದಾನದಲ್ಲೇ ಸರಣಿಯ ಮೂರೂ ಪಂದ್ಯಗಳು ಆಯೋಜನೆಯಾಗಿವೆ.

ಏಕದಿನ ಮಾದರಿಯಲ್ಲಿ ಉಭಯ ತಂಡಗಳು ಇದುವರೆಗೂ ಹತ್ತು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಒಮ್ಮೆ ಐರ್ಲೆಂಡ್‌ ಗೆದ್ದಿದೆ.

ಆಗಸ್ಟ್‌ನಲ್ಲಿ ಪಾಕ್‌ ವಿರುದ್ಧದ ಸರಣಿ: ಐರ್ಲೆಂಡ್‌ ಎದುರಿನ ಸರಣಿಯ ಬಳಿಕ ಇಂಗ್ಲೆಂಡ್‌ ತಂಡವು ಪಾಕಿಸ್ತಾನ ವಿರುದ್ಧ ತಲಾ ಮೂರು ಪಂದ್ಯಗಳ ಟೆಸ್ಟ್‌ ಹಾಗೂ ಟ್ವೆಂಟಿ–20 ಕ್ರಿಕೆಟ್‌ ಸರಣಿಗಳನ್ನು ಆಡಲಿದೆ.

ಈಗಾಗಲೇ ಇಂಗ್ಲೆಂಡ್‌ಗೆ ಬಂದಿಳಿದಿರುವ ಪಾಕ್‌ ತಂಡವು ಆಗಸ್ಟ್‌ 5 ರಿಂದ 9 ರವರೆಗೆ ಓಲ್ಡ್‌ ಟ್ರಾಫರ್ಡ್‌ ಅಂಗಳದಲ್ಲಿ ಮೊದಲ ಟೆಸ್ಟ್‌ ಆಡಲಿದೆ.

ಎರಡು (ಆಗಸ್ಟ್‌ 13–17) ಮತ್ತು ಮೂರನೇ (ಆಗಸ್ಟ್‌ 21–25) ಟೆಸ್ಟ್‌ ಪಂದ್ಯಗಳು ಸೌತಾಂಪ್ಟನ್‌ನಲ್ಲಿ ನಿಗದಿಯಾಗಿವೆ.

ಟ್ವೆಂಟಿ–20 ಸರಣಿಯ ಮೊದಲ ಪಂದ್ಯವು ಆಗಸ್ಟ್‌ 28ರಂದು ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆಯಲಿದೆ. ಎರಡು ಹಾಗೂ ಮೂರನೇ ಪಂದ್ಯಗಳೂ ಇದೇ ಅಂಗಳದಲ್ಲಿ ಜರುಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು