ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್–ಪಾಕಿಸ್ತಾನ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ ; ಬಾಬರ್ ಆಜಂ ಅರ್ಧಶತಕದ ಆಟ

Last Updated 5 ಆಗಸ್ಟ್ 2020, 16:17 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್ : ಆರಂಭಿಕ ಬ್ಯಾಟ್ಸ್‌ಮನ್ ಶಾನ್ ಮಸೂದ್ ಮತ್ತು ಬಾಬರ್ ಆಜಂ ಬುಧವಾರ ಎಮಿರೇಟ್ಸ್‌ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಆರಂಭವಾದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಆಸರೆಯಾದರು.

ಟಾಸ್ ಗೆದ್ದ ಪಾಕಿಸ್ತಾನ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮಳೆ ಬರುವ ಹೊತ್ತಿಗೆ ಪಾಕ್ ತಂಡವು 41.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 121 ರನ್ ಗಳಿಸಿತ್ತು.

ತಾಳ್ಮೆಯಿಂದ ಬ್ಯಾಟಿಂಗ್ ಆರಂಭಿಸಿದ ಮಸೂದ್ ಮತ್ತು ಅಬಿದ್ ಅಲಿ ಅವರು 15ನೇ ಓವರ್‌ನವರೆಗೂ ವಿಕೆಟ್‌ ಪತನವಾಗದಂತೆ ನೋಡಿಕೊಂಡರು. ಆದರೆ, 16ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್ ಅವರ ಎಸೆತದ ಚಲನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಅಬಿದ್ ಅಲಿ ಎಡವಿದರು. ಅವರು ಕಣ್ರಪ್ಪೆ ಮಿಟುಕಿಸುವಷ್ಟರಲ್ಲಿ ಚೆಂಡು ಸ್ಟಂಪ್ ಉರುಳಿಸಿತ್ತು.

ಕ್ರೀಸ್‌ಗೆ ಬಂದ ನಾಯಕ ಅಜರ್ ಅಲಿಆರು ಎಸೆತ ಎದುರಿಸಿದರೂ ಖಾತೆ ತೆರೆಯಲಿಲ್ಲ. ಕ್ರಿಸ್ ವೋಕ್ಸ್‌ ಬೀಸಿದ ಎಲ್‌ಬಿಡಬ್ಲ್ಯು ಬಲೆಯಲ್ಲಿ ಅಜರ್ ಬಿದ್ದರು. ಈ ಹಂತದಲ್ಲಿ ಮಸೂದ್ ಜೊತೆಗೂಡಿದ ಬಾಬರ್ (ಬ್ಯಾಟಿಂಗ್ 52; 71ಎಸೆತ, 9 ಬೌಂಡರಿ) ಸುಂದರ ಹೊಡೆತಗಳನ್ನು ಪ್ರಯೋಗಿಸಿದರು. ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದರು. ಮಸೂದ್ (ಬ್ಯಾಟಿಂಗ್ 45; 134ಎ, 7ಬೌಂ) ಅವರೊಂದಿಗೆ ಬಾಬರ್ ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 78 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: 41.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 121 (ಶಾನ್ ಮಸೂದ್ ಬ್ಯಾಟಿಂಗ್ 45, ಅಬಿದ್ ಅಲಿ 16, ಬಾಬರ್ ಅಜಂ ಬ್ಯಾಟಿಂಗ್ 52, ಕ್ರಿಸ್ ವೋಕ್ಸ್ 14ಕ್ಕೆ1, ಜೋಫ್ರಾ ಆರ್ಚರ್ 22ಕ್ಕೆ1) ವಿವರ ಅಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT