ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟಿ20 ಕ್ರಿಕೆಟ್: ಇಂಗ್ಲೆಂಡ್ ಗೆಲುವಿನ ಆರಂಭ

Published 6 ಡಿಸೆಂಬರ್ 2023, 18:43 IST
Last Updated 6 ಡಿಸೆಂಬರ್ 2023, 18:43 IST
ಅಕ್ಷರ ಗಾತ್ರ

ಮುಂಬೈ: ಡ್ಯಾನಿ ವೈಟ್ ಮತ್ತು ನೆತಾಲೀ ಶಿವರ್ ಬ್ರಂಟ್ ಅವರಿಬ್ಬರ ಅರ್ಧಶತಕಗಳಿಗೆ ಗೆಲುವಿನ ಶ್ರೇಯ ಲಭಿಸಲು ಇಂಗ್ಲೆಂಡ್ ತಂಡದ ಬೌಲರ್ ಸೋಫಿ ಎಕ್ಸೆಲೆಸ್ಟೋನ್ ಕಾರಣರಾದರು. 

ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮಹಿಳಾ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ  ಆತಿಥೇಯ ಭಾರತ ತಂಡವು 38 ರನ್‌ಗಳ ಅಂತರದಿಂದ ಸೋತಿತು. ಸರಣಿಯಲ್ಲಿ ಇಂಗ್ಲೆಂಡ್ ತಂಡವು 1–0 ಮುನ್ನಡೆ ಸಾಧಿಸಿತು. 

ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್‌ನಲ್ಲಿ ಮಧ್ಯಮವೇಗಿ ರೇಣುಕಾ ಸಿಂಗ್ ಅವರ ದಾಳಿಗೆ ಸೋಫಿಯಾ ಡಂಕ್ಲಿ ಮತ್ತು ಅಲೈಸ್ ಕ್ಯಾಪ್ಸಿ ಪೆವಿಲಿಯನ್ ಸೇರಿದರು. ಆಗ ತಂಡದ ಮೊತ್ತ ಕೇವಲ ಎರಡು ರನ್‌ಗಳಾಗಿದ್ದವು. ಆದರೆ, ಈ ಹಂತದಲ್ಲಿ ಜೊತೆಗೂಡಿದ ವೈಟ್ (75; 47ಎ, 4X8, 6X2) ಮತ್ತು ಬ್ರಂಟ್ (77; 53ಎ, 4X13) ಮೂರನೇ ವಿಕೆಟ್ ಜೊತೆಯಾಟದಲ್ಲಿ 138 ರನ್‌ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 197 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 159 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಆರಂಭಿಕ ಬ್ಯಾಟರ್ ಶೆಫಾಲಿ ವರ್ಮಾ (52; 42ಎ) ಅರ್ಧಶತಕ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ (26; 21ಎ) ಮತ್ತು ರಿಚಾ ಘೋಷ್ (21; 16ಎ) ಅವರು ತಂಡಕ್ಕೆ ಬಲ ತುಂಬಲು ಯತ್ನಿಸಿದರು. ಆದರೆ ಎಡಗೈ ಸ್ಪಿನ್ನರ್ ಸೋಫಿ (15ಕ್ಕೆ3) ಮುಂದೆ ಆತಿಥೇಯರ ಗೆಲುವಿನ ಕನಸು ಕಮರಿತು.

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 197 (ಡ್ಯಾನಿ ವೈಟ್ 75, ನೆಥಾಲಿ ಶಿವರ್ ಬ್ರಂಟ್ 77, ಎಮಿ ಜೋನ್ಸ್ 23, ರೇಣುಕಾ ಸಿಂಗ್ 27ಕ್ಕೆ3, ಶ್ರೇಯಾಂಕ ಪಾಟೀಲ 44ಕ್ಕೆ2, ಸೈಕಾ ಇಶಾಕಿ 38ಕ್ಕೆ1) ಭಾರತ:20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 159 (ಶೆಫಾಲಿ ವರ್ಮಾ 52, ಹರ್ಮನ್‌ಪ್ರೀತ್ ಕೌರ್ 26, ರಿಚಾ ಘೋಷ್ 21, ಸೋಫಿ ಎಕ್ಸೆಲ್‌ಸ್ಟೋನ್ 15ಕ್ಕೆ3) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 38 ರನ್ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT