ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023: ನೈಟ್‌ರೈಡರ್ಸ್‌ಗೆ ಕಿಂಗ್ಸ್‌ ಸವಾಲು

Published 7 ಮೇ 2023, 12:20 IST
Last Updated 7 ಮೇ 2023, 12:20 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಆತಿಥೇಯ ಕೋಲ್ಕತ್ತ ನೈಟ್‌ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೋಮವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಎರಡೂ ತಂಡಗಳಿಗೆ  ಪ್ಲೇ ಆಫ್‌ ಪ್ರವೇಶಿಸುವ ಹಾದಿ ಕಠಿಣವಾಗಿದೆ. ಶಿಖರ್ ಧವನ್ ನಾಯಕತ್ವದ ಪಂಜಾಬ್ ತಂಡವು 10 ಪಂದ್ಯಗಳನ್ನು ಆಡಿ ಹತ್ತು ಅಂಕಗಳನ್ನು ಗಳಿಸಿದೆ. ಇಷ್ಟೇ ಸಂಖ್ಯೆಯ ಪಂದ್ಯಗಳನ್ನಾಡಿರುವ ಕೋಲ್ಕತ್ತ ತಂಡವು ಎಂಟು ಅಂಕ ಗಳಿಸಿದೆ. ಇದರಿಂದಾಗಿ ಪಂಜಾಬ್‌ ತಂಡಕ್ಕಿಂತಲೂ ನಿತೀಶ್ ರಾಣಾ ನಾಯಕತ್ವದ ಕೋಲ್ಕತ್ತಕ್ಕೆ ಪ್ಲೇ ಆಫ್‌ ಪ್ರವೇಶ ಇನ್ನೂ ಕಷ್ಟವಿದೆ.

ನಿತೀಶ್ ರಾಣಾ
ನಿತೀಶ್ ರಾಣಾ

ಅದರಿಂದಾಗಿ ಈ ಪಂದ್ಯದಲ್ಲಿ ಉಭಯ ತಂಡಗಳು ತುರುಸಿನ ಹಣಾಹಣಿ ನಡೆಸುವ ನಿರೀಕ್ಷೆ ಇದೆ. ಒಟ್ಟು ಏಳು ತಂಡಗಳೂ ಹತ್ತಕ್ಕಿಂತ ಹೆಚ್ಚು ಪಾಯಿಂಟ್ ಗಳಿಸಿವೆ. ಅದರಿಂದಾಗಿ ಕೊನೆಯ ಹಂತದ ಪಂದ್ಯಗಳು ಬಹಳಷ್ಟು ಕುತೂಹಲ ಕೆರಳಿಸಿವೆ.

ಮೊದಲ ಸುತ್ತಿನಲ್ಲಿಯೂ ಕೆಕೆಆರ್ ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾಗಿದ್ದವು. ಆಗ ಪಂಜಾಬ್ ಗೆದ್ದಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳುವ ಅವಕಾಶ ಈಗ ಕೆಕೆಆರ್‌ಗೆ ಇದೆ. ತಂಡದಲ್ಲಿರುವ ಆಲ್‌ರೌಂಡರ್ ಸುನಿಲ್ ನಾರಾಯಣ್,  ಬ್ಯಾಟರ್ ಜೇಸನ್ ರಾಯ್, ಆ್ಯಂಡ್ರೆ ರಸೆಲ್, ಗುರ್ಬಾಜ್ ಹಾಗೂ ರಿಂಕು ಸಿಂಗ್ ಅವರ ಮೇಲೆ ಬ್ಯಾಟಿಂಗ್ ವಿಭಾಗ ಅವಲಂಬಿತವಾಗಿದೆ.

ಬೌಲರ್‌ಗಳಾದ ವರುಣ ಚಕ್ರವರ್ತಿ, ಸುಯಶ್ ಶರ್ಮಾ,  ಮಧ್ಯಮವೇಗಿ ಶಾರ್ದೂಲ್ ಠಾಕೂರ್ ಹಾಗೂ ವೈಭವ್ ಅರೋರಾ ಅವರು ಉತ್ತಮ ಲಯದಲ್ಲಿದ್ದಾರೆ. ಇವರ ಮುಂದೆ ಪಂಜಾಬ್ ತಂಡದ ಬ್ಯಾಟರ್‌ಗಳಾದ ಶಿಖರ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಶಾರೂಕ್ ಖಾನ್ ಅವರಿಗೆ ತಡೆಯೊಡ್ಡುವ ಸವಾಲು ಇದೆ.

ಸ್ಯಾಮ್ ಕರನ್, ಆರ್ಷದೀಪ್ ಸಿಂಗ್, ಕಗಿಸೊ ರಬಾಡ ಹಾಗೂ ರಾಹುಲ್ ಚಾಹರ್ ಅವರು ಪಂಜಾಬ್ ತಂಡದ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿ, ಜಿಯೊ ಸಿನಿಮಾ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT