ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ: ವೆಸ್ಟ್‌ ಇಂಡೀಸ್‌ಗೆ ಸರಣಿ ಜಯ

ಕೊನೆಯ ಪಂದ್ಯದಲ್ಲಿ ಸೋತ ಇಂಗ್ಲೆಂಡ್
Published 10 ಡಿಸೆಂಬರ್ 2023, 19:14 IST
Last Updated 10 ಡಿಸೆಂಬರ್ 2023, 19:14 IST
ಅಕ್ಷರ ಗಾತ್ರ

ಬ್ರಿಜ್‌ಟೌನ್‌: ವೆಸ್ಟ್‌ ಇಂಡೀಸ್‌ ತಂಡವು ಶನಿವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಆ ಮೂಲಕ ಸರಣಿಯನ್ನೂ ಆತಿಥೇಯರು 2–1 ರಿಂದ ಗೆದ್ದುಕೊಂಡರು.

ಮಳೆಯಿಂದ  40 ಓವರುಗಳಿಗೆ ಮೊಟಕುಗೊಂಡ ಪಂದ್ಯದಲ್ಲಿ ಮೊದಲು ಆಡಬೇಕಾಗಿ ಬಂದ ಇಂಗ್ಲೆಂಡ್ 9 ವಿಕೆಟ್‌ಗೆ 206 ರನ್ ಗಳಿಸಿತು. ಮಳೆ ಮತ್ತೆ ಶುರುವಾದ ಪರಿಣಾಮ ಡಕ್‌ವರ್ತ್ ಲೂಯಿಸ್ ನಿಯಮದಡಿ ವೆಸ್ಟ್ ಇಂಡೀಸ್ ತಂಡದ ಗುರಿಯನ್ನು ನಂತರ 33 ಓವರುಗಳಲ್ಲಿ 188 ರನ್‌ಗಳಿಗೆ ಪರಿಷ್ಕೃತಗೊಳಿಸಲಾಯಿತು. ಆತಿಥೇಯರು 14 ಎಸೆತಗಳು ಉಳಿದಿರುವಂತೆ 6 ವಿಕೆಟ್‌ಗೆ 191 ರನ್ ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT