ಭಾನುವಾರ, ನವೆಂಬರ್ 29, 2020
20 °C

ಗೌತಮ್‌ ಗಂಭೀರ್‌ಗೆ ಕೋವಿಡ್‌ ಪರೀಕ್ಷೆ: ವರದಿ ನೆಗೆಟಿವ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕುಟುಂಬ ಸದಸ್ಯರೊಬ್ಬರಿಗೆ ಕೋವಿಡ್‌–19 ದೃಢಪಟ್ಟ ಬಳಿಕ ಪ್ರತ್ಯೇಕವಾಸದ ಮೊರೆ ಹೋಗಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಮತ್ತು ಸಂಸದ ಗೌತಮ್‌ ಗಂಭೀರ್‌ ಅವರಿಗೆ ನೆಗಟಿವ್‌ ವರದಿ ಬಂದಿದೆ. ಈ ಮಾಹಿತಿಯನ್ನು ಸ್ವತಃ ಗಂಭೀರ್‌ ಅವರೇ ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ.

‘ನನ್ನ ಕೋವಿಡ್–19 ಪರೀಕ್ಷೆ ವರದಿ ನೆಗೆಟಿವ್‌ ಬಂದಿದೆ ಎಂಬುದನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ಹಾರೈಕೆಗಳಿಗಾಗಿ ಧನ್ಯವಾದಗಳು. ಎಲ್ಲರೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ. ಸುರಕ್ಷಿತವಾಗಿರಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಗಂಭೀರ್‌ ಅವರ ಕುಟುಂಬದ ಸದಸ್ಯರೊಬ್ಬರಿಗೆ ಶುಕ್ರವಾರ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರು ಪ್ರತ್ಯೇಕವಾಸದಲ್ಲಿದ್ದರು.

‘ಮನೆಯ ಸದಸ್ಯರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ನಾನು ಪ್ರತ್ಯೇಕವಾಸದಲ್ಲಿದ್ದೇನೆ. ನಾನೂ ಪರೀಕ್ಷೆ ಮಾಡಿಸಿಕೊಂಡಿದ್ದು, ವರದಿಗಾಗಿ ಕಾಯುತ್ತಿದ್ದೇನೆ. ಕೋವಿಡ್‌ಅನ್ನು ಹಗುರವಾಗಿ ಪರಿಗಣಿಸಬೇಡಿ.‍ ಪ್ರತಿಯೊಬ್ಬರು ಮಾರ್ಗಸೂಚಿಗಳನ್ನು ಪಾಲಿಸಿ. ಸುರಕ್ಷಿತವಾಗಿರಿ‘ ಎಂದು ಟ್ವೀಟ್‌ ಮಾಡಿದ್ದರು.

39 ವರ್ಷದ ಗಂಭೀರ್‌, ಭಾರತ ತಂಡದ ಪರ 58 ಟೆಸ್ಟ್‌, 147 ಏಕದಿನ ಹಾಗೂ 37 ಟಿ–20 ಪಂದ್ಯಗಳಲ್ಲಿ ಆಡಿದ್ದಾರೆ. ವಿಶ್ವಕಪ್‌ ವಿಜೇತ ಭಾರತ ತಂಡದ ಸದಸ್ಯರಾಗಿರುವ ಅವರು, ಸದ್ಯ ಪೂರ್ವ ದೆಹಲಿ ಲೋಕಸಭಾ ಸದಸ್ಯರೂ ಹೌದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು