ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮನ್ ತಂಡಕ್ಕೆ ಕನ್ನಡಿಗ ಅನಂತ್ ಸ್ಪಿನ್ ಕೋಚ್

Last Updated 2 ಸೆಪ್ಟೆಂಬರ್ 2021, 16:27 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಒಮನ್ ತಂಡಕ್ಕೆ ಕರ್ನಾಟಕದ ಮಾಜಿ ಕ್ರಿಕೆಟಿಗ ಆರ್. ಅನಂತ್ ಸ್ಪಿನ್ ಕೋಚ್ ಆಗಿ ನೇಮಕವಾಗಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಟೂರ್ನಿಗೆ ಒಮನ್ ದೇಶವೂ ಜಂಟಿ ಆತಿಥ್ಯ ವಹಿಸುತ್ತಿದೆ. ಪ್ರಾಥಮಿಕ ಸುತ್ತಿನಲ್ಲಿ ಬಾಂಗ್ಲಾದೆಶ, ಸ್ಕಾಟ್ಲೆಂಡ್ ಮತ್ತು ಪಪುವಾ ನ್ಯೂಗಿನಿ ತಂಡಗಳೊಂದಿಗೆ ಒಮನ್ ಸ್ಪರ್ಧಿಸಲಿದೆ. ಮಸ್ಕತ್‌ನಲ್ಲಿ ಪಂದ್ಯಗಳು ನಡೆಯಲಿವೆ.

ಕರ್ನಾಟಕ ತಂಡದ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಅನಂತ್ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ನೀಡಲು ತೆರಳಲಿದ್ದಾರೆ. ಕಳೆದ ಎರಡು ದೇಶಿ ಋತುಗಳಲ್ಲಿ ಅವರು ಅರುಣಾಚಲಪ್ರದೇಶದ 19 ವರ್ಷದೊಳಗಿನವರ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 1995–96ರಲ್ಲಿ ಕರ್ನಾಟಕ ತಂಡವು ರಣಜಿ ಟ್ರೋಫಿ ಜಯಿಸುವಲ್ಲಿ ಅನಂತ್ ಪಾತ್ರವೂ ಮಹತ್ವದ್ದಾಗಿತ್ತು. ಆ ಟೂರ್ನಿಯಲ್ಲಿ ಅವರು 20 ವಿಕೆಟ್‌ಗಳನ್ನು ಗಳಿಸಿದ್ದರು.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಸಂಘಟಿಸುವ ವಲಯವಾರು ಶಿಬಿರಗಳಲ್ಲಿ ಅವರು ಸ್ಪಿನ್ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಅನಂತ್ ಅವರು ಈಗಾಗಲೇ ಮಸ್ಕತ್‌ನಲ್ಲಿ ತಂಡಕ್ಕೆ ತರಬೇತಿ ನೀಡಲು ಆರಂಭಿಸಿದ್ದಾರೆ.

‘ನಮಗೆ ಸಮಯ ಕಡಿಮೆ ಇದೆ ಎಂಬ ಅರಿವು ನನಗಿದೆ. ಆದರೆ ಇದೊಂದು ರಾಷ್ಟ್ರೀಯ ತಂಡವಾಗಿದೆ. ಎಲ್ಲ ಆಟಗಾರರು ಚೆನ್ನಾಗಿ ಆಡುವ ಹುಮ್ಮಸ್ಸಿನಲ್ಲಿದ್ದಾರೆ. ಮುಖ್ಯ ಸುತ್ತಿಗೆ ಅರ್ಹತೆ ಗಿಟ್ಟಿಸುವ ಗುರಿ ಅವರದ್ದು. ಅದಕ್ಕೆ ಮಾರ್ಗದರ್ಶನ ನೀಡುವುದು ನಮ್ಮ ಕೆಲಸ’ ಎಂದು 57 ವರ್ಷದ ಅನಂತ್ ಹೇಳಿದರು.

ಒಮನ್ ತಂಡಕ್ಕೆ ಶ್ರೀಲಂಕಾದ ಮಾಜಿ ಆಟಗಾರ ದಿಲೀಪ್ ಮೆಂಡಿಸ್ ಮುಖ್ಯ ಕೋಚ್ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT