ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸೂತ್ರ ಐಪಿಎಲ್‌ ಆಯೋಜನೆಯೇ ಗುರಿ: ಸೌರವ್‌ ಗಂಗೂಲಿ

Last Updated 30 ಆಗಸ್ಟ್ 2020, 15:38 IST
ಅಕ್ಷರ ಗಾತ್ರ

ಕೋಲ್ಕತ್ತ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕುರಿತು ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ವೇಳಾಪಟ್ಟಿಗೆ ಸರಿಯಾಗಿ ತಂಡವು ಸಿದ್ಧವಾಗುತ್ತದೆಯೇ ಎಂದು ಕಾದು ನೋಡುತ್ತೇವೆ. ಇಡೀ ಐಪಿಎಲ್ ಉತ್ತಮವಾಗಿ ನಡೆಯುವಂತೆ ನೋಡಿಕೊಳ್ಳುವುದು ನಮ್ಮ ಗುರಿ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.

ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಇಬ್ಬರು ಆಟಗಾರು ಮತ್ತು 12 ಮಂದಿ ನೆರವು ಸಿಬ್ಬಂದಿಗೆ ಕೊರೊನಾ ಸೋಂಕು ಖಚಿತಪಟ್ಟಿದೆ. ಈ ಕುರಿತು ಗಂಗೂಲಿ ಭಾನುವಾರ ಹೇಳಿಕೆ ನೀಡಿದ್ದರು.

ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ.

’ಇಡೀ ಜಗತ್ತು ಇವತ್ತು ಕೊರೊನಾ ಸಂಕಷ್ಟದೊಂದಿಗೆ ಹೋರಾಡುತ್ತಿದೆ. ಫುಟ್‌ಬಾಲ್ ಮತ್ತು ಕ್ರಿಕೆಟ್‌ ಪಂದ್ಯಗಳನ್ನು ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ. ಸದ್ಯದ ವಾಸ್ತವ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲೇಬೇಕು. ಆದರೆ ಮುಂದುವರಿಯಬೇಕು‘ ಎಂದು ಗಂಗೂಲಿ ನುಡಿದರು.

ಈಡನ್‌ ಗಾರ್ಡನ್‌ನಲ್ಲಿ ವಾಣಿಜ್ಯ ಚಿತ್ರವೊಂದರ ಚಿತ್ರೀಕರಣದಲ್ಲಿ ಗಂಗೂಲಿ ಭಾಗವಹಿಸಿದ್ದರು.

ನೆಟ್ಸ್‌ಗೆ ಬರದ ಹರಭಜನ್: ಚೆನ್ನೈ ತಂಡದಲ್ಲಿರುವ ಹರಭಜನ್ ಸಿಂಗ್ ಚೆನ್ನೈನಲ್ಲಿ ಆಗಸ್ಟ್‌ 15 ರಿಂದ 20ರವರೆಗೆ ಚೆನ್ನೈನಲ್ಲಿ ನಡೆದಿದ್ದ ಪೂರ್ವ ಸಿದ್ಧತಾ ಶಿಬಿರದಲ್ಲಿ ಭಾಗವಹಿಸಿರಲಿಲ್ಲ. ಅವರು ಇನ್ನೂ ಭಾರತದಲ್ಲಿಯೇ ಇದ್ದಾರೆ. ಮಂಗಳವಾರ ಅವರು ಯುಎಇಗೆ ತೆರಳುವ ಸಾಧ್ಯತೆ ಇದೆ ಎಂದು ತಂಡದ ಮೂಲಗಳು ಎಚ್‌ಟಿ ವೆಬ್‌ಸೈಟ್‌ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT