ಸೋಮವಾರ, ಜೂನ್ 1, 2020
27 °C

ಟಿ20 ಬ್ಯಾಟಿಂಗ್‌ ಕೋಚ್‌ಗೆ ಅಂತರರಾಷ್ಟ್ರೀಯ ಅನುಭವ ಬೇಕಿಲ್ಲ: ಗೌತಮ್ ಗಂಭೀರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಟ್ವೆಂಟಿ–20 ಕ್ರಿಕೆಟ್ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ಅನುಭವದ ಅಗತ್ಯವಿಲ್ಲ. ಆಟಗಾರರು ಸಕಾರಾತ್ಮಕವಾಗಿ ಯೋಚಿಸುವಂತೆ ಪ್ರೇರೆಪಿಸುವ ಕಲೆ ಗೊತ್ತಿದ್ದರೆ ಸಾಕು ಎಂದು ಹಿರಿಯ ಕ್ರಿಕೆಟಿಗ ಮತ್ತು ಸಂಸದ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

‘ಟಿ20 ಮಾದರಿಗೆ ಪ್ರತ್ಯೇಕ ಬ್ಯಾಟಿಂಗ್ ಕೋಚ್ ಇರಬೇಕು ಎಂಬುದು ಸಾಧುವಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವವರು ಅದಕ್ಕೆ ಸೂಕ್ತ ಎಂಬುದೂ ಸರಿಯಲ್ಲ. ಹೆಚ್ಚು ಪಂದ್ಯಗಳನ್ನು ಆಡದವರು ಉತ್ತಮ ಕೋಚ್ ಆಗುವುದಿಲ್ಲ ಎನ್ನುವುದೂ ಸತ್ಯವಲ್ಲ’ ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯ ‘ಕ್ರಿಕೆಟ್ ಕನೆಕ್ಟೆಡ್’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

‘ಲ್ಯಾಪ್ ಶಾಟ್ ಅಥವಾ ರಿವರ್ಸ್ ಲ್ಯಾಪ್ ಶಾಟ್‌ ಆಡುವುದನ್ನು ಯಾರೂ ನಿಮಗೆ ಕಲಿಸುವುದಿಲ್ಲ. ಯಾರಾದರೂ ಆ ರೀತಿ ಕಲಿಸಲು ಪ್ರಯತ್ನಿಸಿದರೆ,  ಅವರು ಆ ಆಟಗಾರನ ನೈಜತೆಯನ್ನು ಹಾಳುಮಾಡುತ್ತಿದ್ದಾರೆಂದೇ ಅರ್ಥ’ ಎಂದು ಗಂಭೀರ್ ಹೇಳಿದ್ದಾರೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು