ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ ಬಿಟ್ಟು ಯೋಗ ಮೊರೆ ಹೋದ ಗೇಲ್

ಎರಡು ತಿಂಗಳಿಂದ ಹೊಸ ಬಗೆಯ ವ್ಯಾಯಾಮ ಮಾಡುತ್ತಿರುವ ‘ಯೂನಿವರ್ಸ್ ಬಾಸ್’
Last Updated 15 ಮೇ 2019, 20:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಶ್ವಕಪ್ ಟೂರ್ನಿಯಲ್ಲಿ ಐದನೇ ಬಾರಿ ಕಣಕ್ಕೆ ಇಳಿಯಲು ಸಜ್ಜಾಗುತ್ತಿರುವ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್‌ ಹೊಸಬಗೆಯ ವ್ಯಾಯಾಮ ಮಾದರಿಯನ್ನು ಅನುಸರಿಸುತ್ತಿದ್ದಾರೆ.

ಎರಡು ತಿಂಗಳಿಂದ ಜಿಮ್‌ನಲ್ಲಿ ಕಾಲ ಕಳೆಯುವುದರ ಬದಲು ಅವರು ಯೋಗಕ್ಕೆ ಮೊರೆ ಹೋಗಿದ್ದಾರೆ. ‘ಯೂನಿವರ್ಸ್ ಬಾಸ್’ ಎಂದೇ ಅಡ್ಡ ಹೆಸರು ಹೊಂದಿರುವ ಗೇಲ್‌ 39ನೇ ವಯಸ್ಸಿನಲ್ಲೂ ಫಿಟ್ ಆಗಿದ್ದಾರೆ. ಪಂದ್ಯಗಳಲ್ಲಿ ಆಡಿದ ನಂತರ ಸುಸ್ತು, ಮೈ–ಕೈ ನೋವು ಕಾಡದಿರಲು ಯೋಗ ಮತ್ತು ಮತ್ತು ಮಸಾಜ್‌ಗೆ ಮೊರೆ ಹೋಗುತ್ತಿದ್ದಾರೆ. ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಪರ ಆಡಿದ್ದ ಗೇಲ್ 490 ರನ್‌ ಕಲೆ ಹಾಕಿದ್ದಾರೆ.

‘ಐಪಿಎಲ್‌ ತುಂಬ ಖುಷಿ ಕೊಟ್ಟ ಟೂರ್ನಿ. ವಿಶ್ವಕಪ್‌ನಲ್ಲೂ ರನ್‌ ಹೊಳೆ ಹರಿಯುವ ಸಾಧ್ಯತೆ ಇದೆ. ಸಾಕಷ್ಟು ಅನುಭವ ಇರುವುದರಿಂದ ವಿಶ್ವಕಪ್‌ನಲ್ಲಿ ಹೇಗೆ ಆಡಬೇಕು ಎಂದು ನನಗೆ ಗೊತ್ತಿದೆ. ಸದ್ಯ ನನ್ನ ಸಾಮರ್ಥ್ಯದ ಬಗ್ಗೆ ಖುಷಿ ಇದ್ದು ಇದೇ ರೀತಿಯಲ್ಲಿ ವಿಶ್ವಕಪ್‌ನಲ್ಲೂ ಆಡಲು ಸಾಧ್ಯವಾಗಲಿದೆ ಎಂಬ ವಿಶ್ವಾಸವಿದೆ’ ಎಂದು ಗೇಲ್ ಹೇಳಿದರು.

‘ದೈಹಿಕ ಸಾಮರ್ಥ್ಯದಷ್ಟೇ ಮಾನಸಿಕ ಸಮತೋಲನವೂ ಮುಖ್ಯ. ಇದಕ್ಕಾಗಿ ನನಗೆ ಈಗ ವಿಶ್ರಾಂತಿ ಬೇಕಾಗಿದೆ. ಎರಡು ತಿಂಗಳಿಂದ ಜಿಮ್‌ಗೆ ಹೋಗುತ್ತಿಲ್ಲ. ಮಸಾಜ್ ಮತ್ತು ಸ್ಟ್ರೆಚಿಂಗ್‌ಗೆ ಹೆಚ್ಚು ಒತ್ತು ಕೊಡುತ್ತಿದ್ದು ವಿಶ್ವಕಪ್‌ ವೇಳೆ ಒತ್ತಡದಿಂದ ದೂರ ಇರಲು ಪ್ರಯತ್ನಿಸುತ್ತಿದ್ದೇನೆ’ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT