ಬುಧವಾರ, ಜನವರಿ 22, 2020
25 °C

ಕ್ರಿಕೆಟ್‌ ದಕ್ಷಿಣ ಆಫ್ರಿಕಾದ ನಿರ್ದೇಶಕರಾಗಲು ಒಪ್ಪಿದ ಸ್ಮಿತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್‌ (ಎಎಫ್‌ಪಿ): ಮಾಜಿ ಟೆಸ್ಟ್ ನಾಯಕ ಗ್ರೇಮ್‌ ಸ್ಮಿತ್‌, ಬಿಕ್ಕಟ್ಟು ಎದುರಿಸುತ್ತಿರುವ ಕ್ರಿಕೆಟ್‌ ದಕ್ಷಿಣ ಆಫ್ರಿಕಾದ (ಸಿಎಸ್‌ಎ)  ನಿರ್ದೇಶಕರಾಗಲು ಬುಧವಾರ ಒಪ್ಪಿಕೊಂಡಿದ್ದಾರೆ. ಆದರೆ ಹಂಗಾಮಿ ನೆಲೆಯಲ್ಲಿ ಮಾತ್ರ ಈ ಕೆಲಸ ಮಾಡುವುದಾದಗಿ ಅವರು ಸ್ಪಷ್ಟಪಡಿಸಿದ್ದಾರೆ.ಮೂರು ತಿಂಗಳ ಮಟ್ಟಿಗೆ, ಅಂದರೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾಗುವವರೆಗೆ ಅವರು ಈ ಹುದ್ದೆಯಲ್ಲಿ ಇರಲಿದ್ದಾರೆ ಎಂದು ಸಂಕ್ಷಿಪ್ತ ಹೇಳಿಕೆಯಲ್ಲಿ ಸಿಎಸ್‌ಎ ತಿಳಿಸಿದೆ. ಐಪಿಎಲ್‌ ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆಯಿದೆ.

ಇಂಗ್ಲೆಂಡ್‌ ವಿರುದ್ಧ ನಾಲ್ಕು ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ 15 ದಿನಗಳಿರುವಂತೆ ಈ ಘೋಷಣೆ ಮಾಡಲಾಗಿದೆ. ಸೆಂಚುರಿಯನ್‌ನಲ್ಲಿ ಈ ಟೆಸ್ಟ್‌ 26ರಂದು ನಡೆಯಲಿದೆ.ದುರ್ವರ್ತನೆ ಆರೋಪಗಳ ಮೇಲೆ ಸಿಎಸ್‌ಎದ ಚೀಫ್‌ ಎಕ್ಸಿಕ್ಯೂಟಿವ್‌ ತಬಾಂಗ್‌ ಮೊರೊ ಅವರನ್ನು ಅಮಾನತು ಮಾಡಲಾಗಿತ್ತು. ಆದರೆ ಮಂಡಳಿ ಅಧ್ಯಕ್ಷ ಕ್ರಿಸ್‌ ನೆಂಜೇನಿ ರಾಜೀನಾಮೆ ಕೊಡಬೇಕೆಂಬ ವ್ಯಾಪಕ ಕೂಗಿಗೆ ಬೆಲೆಕೊಟ್ಟಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು