ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ದಿಕ್ ಪಾಂಡ್ಯ–ನತಾಶ ವಿಚ್ಛೇದನ ವದಂತಿ: ಹರಿದಾಡಿದ ಹಳೆ ವಿಡಿಯೊ

Published 25 ಮೇ 2024, 10:23 IST
Last Updated 25 ಮೇ 2024, 10:23 IST
ಅಕ್ಷರ ಗಾತ್ರ

ಮುಂಬೈ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಪತ್ನಿ ನತಾಶ ಸ್ಟಾನ್ಕೊವಿಕ್‌ ಅವರಿಗೆ ವಿಚ್ಚೇದನ ನೀಡಲಿದ್ದಾರೆ ಎಂಬ ವದಂತಿ ಹರಿದಾಡುತ್ತಿರುವ ಬೆನ್ನಲ್ಲೇ, ಪಾಂಡ್ಯ ತಾವು ಗಳಿಸಿದ ಆಸ್ತಿಯಲ್ಲಿ ಶೇ 70ರಷ್ಟು ಜೀವನಾಂಶವನ್ನು ಪತ್ನಿಗೆ ನೀಡಬೇಕಿದೆ ಎಂಬ ಮಾತುಗಳು ಕೇಳಿಬಂದಿದೆ.

ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಆಸ್ತಿ ವಿಚಾರವಾಗಿ ಪಾಂಡ್ಯ ಅವರು ಮಾತನಾಡಿದ ಹಳೆ ವಿಡಿಯೊವೊಂದನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.

‘ಬ್ರೆಕ್‌ಫಾಸ್ಟ್ ವಿತ್ ಚಾಂಪಿಯನ್’ ಶೋದಲ್ಲಿ ಭಾಗವಹಿಸಿದ್ದ ಪಾಂಡ್ಯ, ತಮ್ಮ ಗಳಿಕೆಯ ವಿಚಾರವಾಗಿ ಮಾತನಾಡಿರುವುದು ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ತನ್ನೆಲ್ಲ ಆಸ್ತಿಯನ್ನು ತಾಯಿಯ ಹೆಸರಿಗೆ ನೊಂದಾಯಿಸಿರುವುದಾಗಿಯೂ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

‘ಕಾರಿನಿಂದ ಹಿಡಿದು ಮನೆಯವರೆಗೆ ನನ್ನ ಪ್ರತಿಯೊಂದು ಆಸ್ತಿಯನ್ನು ನನ್ನ ತಾಯಿಯ ಹೆಸರಿಗೆ ನೋಂದಾಯಿಸಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಗಳಿಕೆಯಲ್ಲಿ ಶೇ 50ರಷ್ಟು ಯಾರಿಗೂ ಕೊಡಲು ನಾನು ಬಯಸುವುದಿಲ್ಲ’ ಎಂದು ಸಂದರ್ಶನದ ವೇಳೆ ಹೇಳಿ ಜೋರಾಗಿ ನಕ್ಕಿದ್ದರು.

ಈ ವಿಡಿಯೊವನ್ನು ಹಂಚಿಕೊಂಡಿರುವ ನೆಟ್ಟಿಗರು, ‘ನಾವೆಲ್ಲರೂ ಪಾಂಡ್ಯ ಬಗ್ಗೆ ಚಿಂತೆ ಮಾಡುತ್ತಿದ್ದೇವೆ. ಆದರೆ ಆತ ಮುಂಚಿತವಾಗಿ ಎಲ್ಲವನ್ನು ಯೋಜಿಸಿದ್ದಾರೆ’ ಎಂದು ಕಾಲೆಳೆದಿದ್ದಾರೆ.

2020ರಲ್ಲಿ ಸರಳ ವಿವಾಹವಾಗಿದ್ದ ಈ ದಂಪತಿ, 2023ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ದಂಪತಿಗೆ ಅಗಸ್ತ್ಯ ಎಂಬ ಮಗನಿದ್ದಾನೆ.

ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ತಂಡದ ನಾಯಕತ್ವ ವಹಿಸಿದ್ದ ಪಾಂಡ್ಯ ಅಲ್ಲಿಯೂ ಮುಗ್ಗರಿಸಿದ್ದರು. ಪಾಂಡ್ಯ ವಿಚಾರವಾಗಿ ಪತ್ನಿ ನತಾಶ ಕೂಡ ಟ್ರೋಲ್‌ಗೆ ಒಳಗಾಗಿದ್ದರು.

ವಿಚ್ಛೇದನ ಬಗ್ಗೆ ಹಾರ್ದಿಕ್ ಪಾಂಡ್ಯ ಅವರಾಗಲಿ, ನತಾಶ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT