ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಶಾ ಪಠಾಣಿ ಗೆಳೆಯ ಎನ್ನಲಾದ ವ್ಯಕ್ತಿ ಜೊತೆ ಕಾಣಿಸಿಕೊಂಡ ಪಾಂಡ್ಯ ಪತ್ನಿ ನತಾಶ

Published 26 ಮೇ 2024, 4:18 IST
Last Updated 26 ಮೇ 2024, 4:18 IST
ಅಕ್ಷರ ಗಾತ್ರ

ಮುಂಬೈ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಪತ್ನಿ ನತಾಶ ಸ್ಟಾನ್ಕೊವಿಕ್‌ ಅವರಿಗೆ ವಿಚ್ಚೇದನ ನೀಡಲಿದ್ದಾರೆ ಎಂಬ ವದಂತಿ ಹರಿದಾಡುತ್ತಿರುವ ಬೆನ್ನಲ್ಲೇ, ನತಾಶ ವ್ಯಕ್ತಿಯೊಬ್ಬರ ಜೊತೆ ಕಾಣಿಸಿಕೊಂಡಿದ್ದು ಗಮನ ಸೆಳೆದಿದೆ.

ನತಾಶಾ ಅವರು‌ ಶನಿವಾರ ಮುಂಬೈನ ಬಾಂದ್ರಾ ಕೆಫೆ ಒಂದರಲ್ಲಿ ನಟಿ ದಿಶಾ ಪಠಾಣಿ ಅವರ ಗೆಳೆಯ ಎಂದು ಹೇಳಲಾದ ಅಲೆಕ್ಸ್ ಅಲೆಕ್ಸಾಂಡರ್ ಅವರ ಜೊತೆ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಜೂಮ್ ಟಿ.ವಿ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೊ ಹಂಚಿಕೊಂಡಿದೆ. ನತಾಶಾ ಅವರು ಅಲೆಕ್ಸ್ ಅವರ ಜೊತೆ ಬಿಂದಾಸ್ ಪೋಸ್ ಕೊಟ್ಟಿದ್ದಾರೆ.

ವಿಚ್ಚೇದನದಿಂದ ಪಾಂಡ್ಯ ತಾವು ಗಳಿಸಿದ ಆಸ್ತಿಯಲ್ಲಿ ಶೇ 70ರಷ್ಟು ಜೀವನಾಂಶವನ್ನು ಪತ್ನಿಗೆ ನೀಡಬೇಕಿದೆ ಎಂಬ ಮಾತುಗಳು ಕೇಳಿಬಂದಿದೆ.

2020ರಲ್ಲಿ ಸರಳ ವಿವಾಹವಾಗಿದ್ದ ಈ ದಂಪತಿ, 2023ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ದಂಪತಿಗೆ ಅಗಸ್ತ್ಯ ಎಂಬ ಮಗನಿದ್ದಾನೆ.

ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ತಂಡದ ನಾಯಕತ್ವ ವಹಿಸಿದ್ದ ಪಾಂಡ್ಯ ಅಲ್ಲಿಯೂ ಮುಗ್ಗರಿಸಿದ್ದರು. ಪಾಂಡ್ಯ ವಿಚಾರವಾಗಿ ಪತ್ನಿ ನತಾಶ ಕೂಡ ಟ್ರೋಲ್‌ಗೆ ಒಳಗಾಗಿದ್ದರು.

ವಿಚ್ಛೇದನ ಬಗ್ಗೆ ಹಾರ್ದಿಕ್ ಪಾಂಡ್ಯ ಅವರಾಗಲಿ, ನತಾಶ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT