ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಎಲ್. ರಾಹುಲ್ ಬೆಂಬಲಕ್ಕೆ ನಿಂತ ರೋಹಿತ್‌ರನ್ನು ಪ್ರಶಂಸಿಸಿದ ಗೌತಮ್ ಗಂಭೀರ್

Last Updated 23 ಫೆಬ್ರವರಿ 2023, 14:52 IST
ಅಕ್ಷರ ಗಾತ್ರ

ಮುಂಬೈ: ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವ ಟೀಮ್ ಇಂಡಿಯಾ ಬ್ಯಾಟರ್ ಕೆ.ಎಲ್. ರಾಹುಲ್ ಅವರ ಪರ ನಿಂತ ರೋಹಿತ್ ಶರ್ಮಾ ನಿರ್ಧಾರವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ.

‘ಕೆಲವೊಮ್ಮೆ ನಾವು ಪ್ರತಿಭೆಗಳನ್ನು ಬೆಂಬಲಿಸಬೇಕಾಗುತ್ತದೆ. ಕೆ.ಎಲ್. ರಾಹುಲ್ ಅವರನ್ನು ಬೆಂಬಲಿಸಿದ ರೋಹಿತ್ ಶರ್ಮಾ ಅವರನ್ನು ನಾನು ಪ್ರಶಂಸಿಸುತ್ತೇನೆ. ಅವರ ವೃತ್ತಿಜೀವನವೂ ಆರಂಭದಲ್ಲಿ ಇದೇ ರೀತಿ ಇತ್ತು. ಈಗ ರೋಹಿತ್ ಶರ್ಮಾ ಎಂತಹ ಆಟಗಾರರಾಗಿದ್ದಾರೆ ಎಂಬುದನ್ನು ನೋಡಬಹುದು’ ಎಂದು ಅವರು ಎಎನ್‌ಐ ಸಂದರ್ಶನದಲ್ಲಿ ಹೇಳಿದ್ದಾರೆ.

ರಾಹುಲ್ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ‘ಅವರ ಬ್ಯಾಟಿಂಗ್ ಕುರಿತಂತೆ ಹಲವು ಮಾತುಗಳು ಕೇಳಿಬರುತ್ತಿವೆ. ಆದರೆ, ನಾನಾಗಲಿ, ತಂಡದ ಆಡಳಿತ ಮಂಡಳಿಯಾಗಲಿ, ಬ್ಯಾಟರ್ ಸಾಮರ್ಥ್ಯವನ್ನು ಪರಿಗಣಿಸುತ್ತೇವೆ. ರನ್ ಗಳಿಸುವ ಸಾಮರ್ಥ್ಯ ಇರುವವರಿಗೆ ಅವಕಾಶ ಸಿಗುತ್ತದೆ. ಅದು ರಾಹುಲ್‌ಗೆ ಮಾತ್ರವಲ್ಲ’ಎಂದು ಹೇಳಿದ್ದರು.

ಕಳೆದ 10 ಟೆಸ್ಟ್ ಇನಿಂಗ್ಸ್‌ಗಳಲ್ಲಿ ರಾಹುಲ್ ಗಳಿಸಿದ ಗರಿಷ್ಠ ಮೊತ್ತ 23 ರನ್ ಆಗಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅವರು ವೈಫಲ್ಯ ಕಂಡಿದ್ದಾರೆ. ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರಾಹುಲ್ ಅವರು ಕೇವಲ 17 ರನ್‌ ಗಳಿಸಿ ನಿರ್ಗಮಿಸಿದ್ದರು. ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಕೇವಲ 20 ರನ್‌ ಗಳಿಸಿದ್ದರು.

ವೆಂಕಟೇಶ್ ಪ್ರಸಾದ್, ಕೃಷ್ಣಮಾಚಾರಿ ಶ್ರೀಕಾಂತ್ ಸೇರಿದಂತೆ ಮಾಜಿ ಕ್ರಿಕೆಟಿಗರು, ವೈಫಲ್ಯದ ನಡುವೆ ರಾಹುಲ್‌ಗೆ ಅವಕಾಶ ನೀಡುತ್ತಿರುವ ಬಗ್ಗೆ ಅಸಮಾಧಾನ ತೋರ್ಪಡಿಸಿದ್ದರು.

ಎಂಪಿಎಲ್‌ಗೆ ಮೆಚ್ಚುಗೆ

ಮಹಿಳೆಯರ ಪ್ರೀಮಿಯರ್ ಲೀಗ್ ಆರಂಭಿಸಿರುವ ಬಿಸಿಸಿಐ ನಿರ್ಧಾರವನ್ನು ಶ್ಲಾಘಿಸಿದ ಗಂಭೀರ್, ಇದು ಐತಿಹಾಸಿಕ ನಿರ್ಧಾರ. ನಾವು ಲಿಂಗ ಸಮಾನತೆ ಬಗ್ಗೆ ಮಾತನಾಡುತ್ತೇವೆ. ಜಾರಿಗೆ ತಂದಿರುವುದು ಒಳ್ಳೆಯ ನಿರ್ಧಾರ ಎಂದಿದ್ದಾರೆ. ಐಪಿಎಲ್‌ನಲ್ಲಿ ಹಲವು ಯುವತಿಯರಿಗೆ ಆಡಲು ಅವಕಾಶ ಸಿಗುತ್ತದೆ. ಮುಂಬರುವ ದಿನಗಳಲ್ಲಿ ಅವರು ದೇಶಕ್ಕೆ ಕೀರ್ತಿ ತರಬಹುದು ಎಂದು ಗಂಭೀರ್ ಹೇಳಿದ್ದಾರೆ.

ಐಪಿಎಲ್ ಲಖನೌ ತಂಡದ ಮೆಂಟರ್ ಆಗಿರುವ ಗೌತಮ್, ಐಪಿಎಲ್ ಸರಣಿ ಬಗ್ಗೆಯೂ ಮಾತನಾಡಿದ್ದಾರೆ.

ಎರಡು ತಿಂಗಳ ಕಾಲ ಐಪಿಎಲ್ ಸರಣಿ ನಡೆಯಲಿದೆ. ನಮ್ಮ ತಂಡ ಉತ್ತಮವಾಗಿದೆ. ಸ್ಥಿರ ಪ್ರದರ್ಶನ ಅತ್ಯಂತ ಮುಖ್ಯ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT