ದುಬೈ: ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.

ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹತ್ವದ ಘೋಷಣೆಯನ್ನು ಮಾಡಿದ್ದು, ಬಹುಮಾನ ಮೊತ್ತದಲ್ಲಿ ಶೇ 53ರಷ್ಟು ಹೆಚ್ಚಳ ಮಾಡಿದೆ.

ಈ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡವು ಸುಮಾರು ₹19.46 ಕೋಟಿ ಪ್ರಶಸ್ತಿ ಮೊತ್ತ (USD 2.24 million) ಪಡೆಯಲಿದೆ ಎಂದು ಪ್ರಕಟಿಸಿದೆ.

ರನ್ನರ್ ಅಪ್ ಆದ ತಂಡವು ₹9.75 ಕೋಟಿ (USD 1.12 million) ಮತ್ತು ಸೆಮಿಫೈನಲ್ನಲ್ಲಿ ಸೋತ ತಂಡವು ₹4.86 ಕೋಟಿ (USD 560,000) ಗಳಿಸಲಿದೆ.

ಒಟ್ಟಾರೆ ಬಹುಮಾನ ಮೊತ್ತವನ್ನು ₹60 ಕೋಟಿಗೆ (USD 6.9 million) ಹೆಚ್ಚಿಸಲಾಗಿದೆ. ಹಾಗೆಯೇ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿ ತಂಡಗಳಿಗೂ ₹1.08 ಕೋಟಿ (USD 125,000) ಸಿಗಲಿವೆ.

ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದ ಆತಿಥ್ಯದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಪಾಕಿಸ್ತಾನ ಹಾಗೂ ಯುಎಇನಲ್ಲಿ ಟೂರ್ನಿ ಆಯೋಜನೆಯಾಗಲಿದೆ. ಭಾರತ ತನ್ನ ಪಂದ್ಯಗಳನ್ನು ಯುಎಇನಲ್ಲಿ ಆಡಲಿದೆ.

ಫೆಬ್ರುವರಿ 19ರಂದು ಕರಾಚಿಯಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ. ಫೈನಲ್ ಪಂದ್ಯ ಮಾರ್ಚ್ 9ರಂದು ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ಫೆಬ್ರುವರಿ 23ರಂದು ದುಬೈಯಲ್ಲಿ ನಡೆಯಲಿದೆ.
.IPL: ಆರ್ಸಿಬಿಗೆ ರಜತ್ ಪಾಟೀದಾರ್ ಸರದಾರ.ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್: ಆಟಗಾರರ ಕುಟುಂಬ ತೆರಳುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.