ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಬಾಬ್ವೆ ತಂಡದ ನಾಯಕ ಚಿಗುಂಬರಾ ನಿವೃತ್ತಿ

Last Updated 10 ನವೆಂಬರ್ 2020, 16:51 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಜಿಂಬಾಬ್ವೆ ಕ್ರಿಕೆಟ್ ತಂಡದ ಆಟಗರ ಎಲ್ಟನ್ ಚಿಗುಂಬರಾ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

ಸದ್ಯ ನಡೆಯುತ್ತಿರುವ ಪಾಕಿಸ್ತಾನ ಎದುರಿನ ಸರಣಿಯು ಅವರ ವೃತ್ತಿಜೀವನದಲ್ಲಿ ಕೊನೆಯ ಸರಣಿಯಾಗಲಿದೆ.

16 ವರ್ಷಗಳಿಂದ ಅವರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 14 ಟೆಸ್ಟ್, 213 ಏಕದಿನ ಮತ್ತು 54 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಬಲಗೈ ಆಲ್‌ರೌಂಡರ್‌ ಚಿಗುಂಬರಾ ಜಿಂಬಾಬ್ವೆ ತಂಡಕ್ಕೆ ನಾಯಕರಾಗಿಯೂ ಆಡಿದ್ದರು.

’ಎಲ್ಟನ್ ಅವರ ದೀರ್ಘ ವೃತ್ತಿ ಜೀವನ ಸೊಗಸಾಗಿತ್ತು. ಅವರ ಜೀವನ ಮತ್ತು ವೃತ್ತಿಪರತೆ ಎಲ್ಲರಿಗೂ ಪ್ರೇರಣೆಯಾಗುವಂತದ್ದು. ವಿದಾಯದ ನಂತರ ಅವರ ಬದುಕು ಸುಖಕರವಾಗಿರಲಿ‘ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನು ಸವಾನಿ ಅಭಿನಂದಿಸಿದ್ದಾರೆ.

’ಚಿಗುಂಬರಾ ಅವರು ನಿವೃತ್ತಿಯ ನಂತರವೂ ಕ್ರಿಕೆಟ್‌ನ ಶ್ರೇಯೋಭಿವೃದ್ಧಿಗಾಗಿ ಕೈಜೋಡಿಸುವ ಭರವಸೆ ಇದೆ. ಅವರ ಅನುಭವವು ಕ್ರಿಕೆಟ್‌ ಮತ್ತು ಯುವ ಕ್ರಿಕೆಟಿಗರ ಬೆಳವಣಿಗೆಗೆ ವಿನಿಯೋಗವಾಗಲಿ‘ ಎಂದು ಮನು ಆಶಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT