ಭಾನುವಾರ, ಜನವರಿ 17, 2021
22 °C

ಕೊಹ್ಲಿ, ಅಶ್ವಿನ್‌ ದಶಕದ ಆಟಗಾರರು: ಐಸಿಸಿಯಿಂದ ನಾಮನಿರ್ದೇಶನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಸ್ಪಿನ್ನರ್‌ ಅಶ್ವಿನ್‌ ಅವರನ್ನು ದಶಕದ ಕ್ರಿಕೆಟಿಗ ಪ್ರಶಸ್ತಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮಂಗಳವಾರ ನಾಮನಿರ್ದೇಶನ ಮಾಡಿದೆ. ವಿರಾಟ್‌ ಅವರು ಐಸಿಸಿಯ ಎಲ್ಲ ಐದೂ ಪ್ರಶಸ್ತಿ ವಿಭಾಗಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ದಶಕದ ಕ್ರಿಕೆಟಿಗ ಪ್ರಶಸ್ತಿಗೆ ಒಟ್ಟು ಏಳು ಆಟಗಾರರನ್ನು ಐಸಿಸಿ ನಾಮನಿರ್ದೇಶನ ಮಾಡಿದೆ. ಅಶ್ವಿನ್‌, ಕೊಹ್ಲಿ ಅವರನ್ನು ಹೊರತುಪಡಿಸಿ ಇಂಗ್ಲೆಂಡ್‌ನ ಜೋ ರೂಟ್‌, ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌, ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌, ದಕ್ಷಿಣ ಆಫ್ರಿಕಾದ ಎ.ಬಿ.ಡಿವಿಲಿಯರ್ಸ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಈ ಪಟ್ಟಿಯಲ್ಲಿದ್ದಾರೆ.

ದಶಕದ ಏಕದಿನ ಆಟಗಾರ ಪ್ರಶಸ್ತಿಗೆ ಭಾರತ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ, ರೋಹಿತ್‌ ಶರ್ಮಾ, ಲಸಿತ್‌ ಮಾಲಿಂಗ (ಶ್ರೀಲಂಕಾ), ಮಿಚೆಲ್‌ ಸ್ಟಾರ್ಕ್‌ (ಆಸ್ಟ್ರೇಲಿಯಾ), ಸಂಗಕ್ಕಾರ ಹಾಗೂ ಡಿವಿಲಿಯರ್ಸ್‌ ನಾಮನಿರ್ದೇಶನಗೊಂಡಿದ್ದಾರೆ.

ಕೊಹ್ಲಿ ಹಾಗೂ ರೋಹಿತ್ ಅವರು ದಶಕದ ಟಿ–20 ಆಟಗಾರ ಪ್ರಶಸ್ತಿ ವಿಭಾಗದಲ್ಲೂ ಸ್ಥಾನ ಪಡೆದಿದ್ದಾರೆ. ರಶೀದ್‌ ಖಾನ್‌ (ಅಫ್ಗಾನಿಸ್ತಾನ), ಇಮ್ರಾನ್ ತಾಹೀರ್‌ (ದಕ್ಷಿಣ ಆಫ್ರಿಕಾ), ಆ್ಯರನ್‌ ಫಿಂಚ್‌ (ಆಸ್ಟ್ರೇಲಿಯಾ), ಮಾಲಿಂಗ ಹಾಗೂ ಕ್ರಿಸ್‌ ಗೇಲ್‌ (ವೆಸ್ಟ್ ಇಂಡೀಸ್‌) ಪಟ್ಟಿಯಲ್ಲಿರುವ ಇತರ ಆಟಗಾರರು.

ದಶಕದ ‘ಸ್ಪಿರಿಟ್‌ ಆಫ್‌ ಕ್ರಿಕೆಟ್‌’ ಪ್ರಶಸ್ತಿಗೆ ಭಾರತದಿಂದ ಧೋನಿ ಹಾಗೂ ಕೊಹ್ಲಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ಮತದಾನದ ಮೂಲಕ ಪ್ರಶಸ್ತಿ ಪುರಸ್ಕೃತರನ್ನು ನಿರ್ಧರಿಸಲಾಗುತ್ತದೆ.

ನಾಮನಿರ್ದೇಶನಗೊಂಡವರ ಪಟ್ಟಿ
* ದಶಕದ ಆಟಗಾರ:
ವಿರಾಟ್‌ ಕೊಹ್ಲಿ, ರವಿಚಂದ್ರನ್‌ ಅಶ್ವಿನ್‌, ಜೋ ರೂಟ್‌ (ಇಂಗ್ಲೆಂಡ್‌), ಕೇನ್‌ ವಿಲಿಯಮ್ಸನ್‌ (ನ್ಯೂಜಿಲೆಂಡ್‌), ಸ್ಟೀವ್ ಸ್ಮಿತ್‌ (ಆಸ್ಟ್ರೇಲಿಯಾ), ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ) ಮತ್ತು ಕುಮಾರ ಸಂಗಕ್ಕಾರ (ಶ್ರೀಲಂಕಾ).

* ದಶಕದ ಏಕದಿನ ಆಟಗಾರ್ತಿ: ಮೆಗ್‌ ಲ್ಯಾನಿಂಗ್‌, ಎಲಿಸ್‌ ಪೆರಿ (ಇಬ್ಬರೂ ಆಸ್ಟ್ರ್ರೇಲಿಯಾ), ಮಿಥಾಲಿ ರಾಜ್‌ (ಭಾರತ), ಸುಜಿ ಬೇಟ್ಸ್ (ನ್ಯೂಜಿಲೆಂಡ್‌), ಸ್ಟೆಫಾನಿ ಟೇಲರ್‌ (ವೆಸ್ಟ್ ಇಂಡೀಸ್‌) ಹಾಗೂ ಜೂಲನ್‌ ಗೋಸ್ವಾಮಿ (ಭಾರತ).

* ದಶಕದ ಆಟಗಾರ್ತಿ: ಮೆಗ್‌ ಲ್ಯಾನಿಂಗ್‌, ಎಲಿಸ್‌ ಪೆರಿ, ಸುಜಿ ಬೇಟ್ಸ್, ಸ್ಟೆಫಾನಿ ಟೇಲರ್‌, ಮಿಥಾಲಿ ರಾಜ್‌, ಸಾರಾ ಟೇಲರ್‌ (ಇಂಗ್ಲೆಂಡ್‌).

* ದಶಕದ ಏಕದಿನ ಆಟಗಾರ: ವಿರಾಟ್‌ ಕೊಹ್ಲಿ, ಮಹೇಂದ್ರಸಿಂಗ್ ಧೋನಿ, ರೋಹಿತ್‌ ಶರ್ಮಾ, ಲಸಿತ್‌ ಮಾಲಿಂಗ (ಶ್ರೀಲಂಕಾ), ಮಿಚೆಲ್‌ ಸ್ಟಾರ್ಕ್‌ (ಆಸ್ಟ್ರೇಲಿಯಾ), ಸಂಗಕ್ಕಾರ ಹಾಗೂ ಡಿವಿಲಿಯರ್ಸ್‌

* ದಶಕದ ಟೆಸ್ಟ್ ಆಟಗಾರ: ವಿರಾಟ್‌ ಕೊಹ್ಲಿ, ಕೇನ್‌ ವಿಲಿಯಮ್ಸನ್‌, ಸ್ಟೀವ್ ಸ್ಮಿತ್‌, ಜೇಮ್ಸ್ ಆ್ಯಂಡರ್ಸನ್‌ (ಇಂಗ್ಲೆಂಡ್‌), ರಂಗನಾ ಹೆರಾತ್‌ (ಶ್ರೀಲಂಕಾ) ಹಾಗೂ ಯಾಸಿರ್ ಶಾ (ಪಾಕಿಸ್ತಾನ).

* ದಶಕದ ಟಿ–20 ಆಟಗಾರ: ರಶೀದ್‌ ಖಾನ್‌, ವಿರಾಟ್‌ ಕೊಹ್ಲಿ, ಇಮ್ರಾನ್‌ ತಾಹೀರ್, ಆ್ಯರನ್ ಫಿಂಚ್‌, ಲಸಿತ್ ಮಾಲಿಂಗ, ಕ್ರಿಸ್‌ ಗೇಲ್‌, ರೋಹಿತ್‌ ಶರ್ಮಾ.

* ದಶಕದ ‘ಸ್ಪಿರಿಟ್ ಆಫ್‌ ಕ್ರಿಕೆಟ್‌’ ಪ್ರಶಸ್ತಿ: ವಿರಾಟ್‌ ಕೊಹ್ಲಿ, ಕೇನ್‌ ವಿಲಿಯಮ್ಸನ್‌, ಬ್ರೆಂಡನ್‌ ಮೆಕಲಮ್ (ನ್ಯೂಜಿಲೆಂಡ್‌), ಮಿಸ್ಬಾ ಉಲ್‌ ಹಕ್‌ (ಪಾಕಿಸ್ತಾನ), ಮಹೇಂದ್ರ ಸಿಂಗ್ ಧೋನಿ, ಅನ್ಯಾ ಶ್ರಬ್ಸ್‌ಸೋಲ್‌ (ಇಂಗ್ಲೆಂಡ್‌), ಕ್ಯಾಥರೀನ್ ಬ್ರಂಟ್‌ (ಇಂಗ್ಲೆಂಡ್‌), ಮಹೇಲಾ ಜಯವರ್ಧನೆ (ಶ್ರೀಲಂಕಾ), ಡೇನಿಯಲ್‌ ವೆಟೋರಿ (ನ್ಯೂಜಿಲೆಂಡ್‌).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು