ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Test Rankings: WTC ಫೈನಲ್‌ನಲ್ಲಿ ಆಡದಿದ್ದರೂ ಅಗ್ರಸ್ಥಾನ ಕಾಯ್ದುಕೊಂಡ ಅಶ್ವಿನ್

Published 14 ಜೂನ್ 2023, 11:01 IST
Last Updated 14 ಜೂನ್ 2023, 11:01 IST
ಅಕ್ಷರ ಗಾತ್ರ

ದುಬೈ: ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್‌. ಅಶ್ವಿನ್ ಅವರು ಐಸಿಸಿ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಹತ್ತು ವರ್ಷಗಳಿಂದ ಐಸಿಸಿ ಟ್ರೋಫಿಯ ಬರ ಎದುರಿಸುತ್ತಿರುವ ಭಾರತ ತಂಡಕ್ಕೆ ಈ ಬಾರಿ ಮತ್ತೆ ನಿರಾಸೆ ಕಾಡಿತು. ಇಂಗ್ಲೆಂಡ್‌ನ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ರೋಹಿತ್‌ ಶರ್ಮಾ ಬಳಗವನ್ನು 209 ರನ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ ತಂಡ, ಟೆಸ್ಟ್‌ ಕ್ರಿಕೆಟ್‌ನ ನೂತನ ದೊರೆ ಎನಿಸಿಕೊಂಡಿತು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಿಡುಗಡೆ ಮಾಡಿದ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ 860 ಪಾಯಿಂಟ್‌ ಹೊಂದಿರುವ ಅಶ್ವಿನ್ ಮೊದಲ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ 850 ಪಾಯಿಂಟ್‌ಗಳೊಂದಿಗೆ ಎಡರನೇ ಸ್ಥಾನದಲ್ಲಿದ್ದಾರೆ. ನಂತರ ಸ್ಥಾನದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಪಾಕ್‌ನ ಶಾಹೀನ್ ಅಫ್ರಿದಿ ಇದ್ದಾರೆ.

ಟೆಸ್ಟ್ ಬ್ಯಾಟರ್‌ ರ‍್ಯಾಂಕಿಂಗ್‌ನಲ್ಲಿ ಮಾರ್ನಸ್‌ ಲಾಬುಶೇನ್ (903 ಪಾಯಿಂಟ್‌) ಮೊದಲ ಸ್ಥಾನದಲ್ಲಿದ್ದಾರೆ. ಒಂದು ಸ್ಥಾನ ಬಡ್ತಿ ಪಡೆದಿರುವ ಸ್ಟೀವ್ ಸ್ಮಿತ್ (885 ಪಾಯಿಂಟ್) ಎರಡನೇ ಸ್ಥಾನದಲ್ಲಿದ್ದಾರೆ. ಇತ್ತ ಮೂರು ಸ್ಥಾನ ಬಡ್ತಿ ಪಡೆದಿರುವ ಟ್ರಾವಿಸ್ ಹೆಡ್ (884 ಪಾಯಿಂಟ್‌) ಮೂರನೇ ಸ್ಥಾನದಲ್ಲಿದ್ದಾರೆ.

ಟೀಮ್ ಇಂಡಿಯಾ ಬ್ಯಾಟರ್‌ಗಳಾದ ರಿಷಭ್ ಪಂತ್ 10ನೇ ಸ್ಥಾನ, ರೋಹಿತ್ ಶರ್ಮಾ 12 ಮತ್ತು ವಿರಾಟ್ ಕೊಹ್ಲಿ 13ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಟೆಸ್ಟ್‌ ಆಲ್‌ರೌಂಡರ್‌ ರ‍್ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾದ ರವೀಂದ್ರ ಜಡೇಜ ಆಗ್ರಸ್ಥಾನದಲ್ಲಿದ್ದು, ಆರ್‌. ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ.

ಆರ್‌.ಅಶ್ವಿನ್ ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಆಡಿರಲಿಲ್ಲ. ಅವಕಾಶ ವಂಚಿತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT