ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND v SA Test: ನ್ಯೂಲ್ಯಾಂಡ್ಸ್ ಪಿಚ್‌ಗೆ ತೃಪ್ತಿಕರವಲ್ಲದ ರೇಟಿಂಗ್ ನೀಡಿದ ಐಸಿಸಿ

54 ನಿಮಿಷಗಳು, 642 ಎಸೆತಗಳು, 33 ವಿಕೆಟ್‌ಗಳು ಮತ್ತು 464 ರನ್‌ಗಳು.
Published 9 ಜನವರಿ 2024, 11:43 IST
Last Updated 9 ಜನವರಿ 2024, 11:43 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯ ನಡೆದ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ ಪಿಚ್‌ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ತೃಪ್ತಿಕರವಲ್ಲದ ರೇಟಿಂಗ್ ನೀಡಿದೆ.

ಜನವರಿ 3ರಂದು ಆರಂಭವಾದ 2ನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯ ಕೇವಲ ಎರಡೇ ದಿನಗಳಲ್ಲಿ ಮುಕ್ತಾಯಗೊಂಡಿತ್ತು.

54 ನಿಮಿಷಗಳು, 642 ಎಸೆತಗಳು, 33 ವಿಕೆಟ್‌ಗಳು ಮತ್ತು 464 ರನ್‌ಗಳು. ಜ.4 (ಗುರುವಾರ) ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ಮುಕ್ತಾಯವಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್‌ನ ಮುಖ್ಯಾಂಶಗಳು ಇವು. ಟೆಸ್ಟ್‌ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸಮಯದಲ್ಲಿ ಮುಗಿದ ಈ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ದಾಖಲಿಸಿತು. ಸರಣಿ ಸೋಲು ತಪ್ಪಿಸಿಕೊಂಡ ರೋಹಿತ್ ಶರ್ಮಾ ಬಳಗವು 1–1ರಿಂದ ಸಮಬಲ ಸಾಧಿಸಿತ್ತು.

ಆದರೆ ಇಷ್ಟೆಲ್ಲದರ ನಡುವೆ ಕ್ರಿಕೆಟ್ ಜಯಿಸಿತೇ ಎಂಬ ಪ್ರಶ್ನೆ ಕಾಡಿತ್ತು. ಕೆಲವರು ಟಿ20 ಕ್ರಿಕೆಟ್‌ನಿಂದಾಗಿ ಹೀಗಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರೆ, ಕೆಲವರು ಪಿಚ್‌ ಪರಿಸ್ಥಿತಿಯಿಂದಾಗಿ ಈ ಫಲಿತಾಂಶ ಬಂದಿದೆ ಎಂದು ವಿಶ್ಲೇಷಿಸಿದ್ದರು.

ಅಸಹಜವಾದ ಬೌನ್ಸ್, ಲೇಟ್‌ ಸ್ವಿಂಗ್ ಮತ್ತು ಕ್ರಾಸ್‌ ವಿಂಡ್ ಪರಿಣಾಮ ದಿಂದಾಗಿ ಚೆಂಡಿನ ಚಲನೆಯನ್ನು ಗುರುತಿಸುವಲ್ಲಿ ಉಭಯ ತಂಡಗಳ ಬ್ಯಾಟರ್‌ಗಳು ಪ್ರತಿಕ್ಷಣವೂ ಹರ ಸಾಹಸ ಪಟ್ಟಿದ್ದು ಸುಳ್ಳಲ್ಲ.

ಐದು ದಿನಗಳ ಮಾದರಿಯ ಕ್ರಿಕೆಟ್‌ ಬಗ್ಗೆ ಕಾಳಜಿ ವ್ಯಕ್ತಪಡಿಸುವವರು ಹುಬ್ಬೇರಿಸಿದ್ದಾರೆ. ಈ ರೀತಿ ಅತಿ ಕಡಿಮೆ ಸಮಯದಲ್ಲಿ ಫಲಿತಾಂಶ ಬಂದರೆ ಈ ದೀರ್ಘ ಮಾದರಿಯ ಕ್ರಿಕೆಟ್‌ ಭವಿಷ್ಯವೇನು ಎಂಬ ಚರ್ಚೆಯೂ ನಡೆದಿತ್ತು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಐಸಿಸಿಯು ಪಿಚ್‌ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವುದು ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT