ಭಾನುವಾರ, ಜೂನ್ 7, 2020
27 °C

ಗಾಯದ ಸಮಸ್ಯೆಯಿಂದ ಪಾರಾಗಲು ಬೌಲರ್‌ಗಳು ಕನಿಷ್ಠ 2 ತಿಂಗಳು ಅಭ್ಯಾಸ ಮಾಡಲಿ: ಐಸಿಸಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ದುಬೈ: ಲಾಕ್‌ಡೌನ್‌ ನಂತರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವ ಬೌಲರ್‌ಗಳು, ಗಾಯದ ಸಮಸ್ಯೆಯಿಂದ ಪಾರಾಗಲು ಕನಿಷ್ಠ ಎರಡು ಅಥವಾ ಮೂರು ತಿಂಗಳು ಅಭ್ಯಾಸ ನಡೆಸಬೇಕಾಗುತ್ತದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಹೇಳಿದೆ.

ವಿಶ್ವಮಟ್ಟದ ಬೇರೆ ಕ್ರೀಡೆಗಳಂತೆಯೇ ಕ್ರಿಕೆಟ್‌ ಆಡುವುದನ್ನೂ ಕಳೆದ ಮಾರ್ಚ್‌ನಿಂದ ನಿಲ್ಲಿಸಲಾಗಿದೆ. ಆದರೆ, ಕೆಲವು ದೇಶಗಳು ಕ್ರೀಡೆಗಳನ್ನು ಮುಂದುವರಿಸಲು, ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಿ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿವೆ.

ಇಂಗ್ಲೆಂಡ್‌ನಲ್ಲಿ ಕ್ರಿಕೆಟಿಗರು ಕೌಶಲ್ಯಾಧಾರಿತ ಪ್ರತ್ಯೇಕ ಅಭ್ಯಾಸಗಳನ್ನು ಈ ವಾರದಿಂದ ಆರಂಭಿಸಿದ್ದಾರೆ. ಕೆಲ ಕ್ರಿಕೆಟ್‌ ಮಂಡಳಿಗಳು ಕೋವಿಡ್‌–19 ನಿಂದಾಗಿ ಮುಂದೂಡಲಾಗಿರುವ ಸರಣಿಗಳನ್ನು ಮುಂದುವರಿಸುವ ಯೋಜನೆಯಲ್ಲಿವೆ. ಸೋಂಕು ಹರಡುವ ಭೀತಿಯಿಂದ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.

ಈ ಸಂಬಂಧ ಐಸಿಸಿ ಶುಕ್ರವಾರ ಪ್ರಕಟಿಸಿರುವ ‘ಮರಳಿ ಕ್ರೀಡಾಂಗಣಕ್ಕೆ’ ಮಾರ್ಗಸೂಚಿಯಲ್ಲಿ, ‘ಲಾಕ್‌ಡೌನ್‌ ಬಳಿಕ ಆಟಕ್ಕೆ ಮರಳುವಾಗ ವಿಶೇಷವಾಗಿ ಬೌಲರ್‌ಗಳು ಗಾಯದ ಸಮಸ್ಯೆಗೆ ತುತ್ತಾಗಲಿದ್ದಾರೆ’ ಎಂದಿದೆ. ಮುಂದುವರಿದು, ತಂಡದಲ್ಲಿ ಹೆಚ್ಚು ಆಟಗಾರರು ಇರುವಂತೆ ನೋಡಿಕೊಳ್ಳಬೇಕು. ಬೌಲರ್‌ಗಳ ಮೇಲಿನ ಜವಾಬ್ದಾರಿಯ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಕನಿಷ್ಠ 4-5 ವಾರಗಳ ನಿಕಟ ಅಭ್ಯಾಸದೊಂದಿಗೆ 12 ವಾರಗಳ ಸಿದ್ಧತೆ ಅಗತ್ಯ. ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವ ಬೌಲರ್‌ಗಳು ಕನಿಷ್ಠ ಆರು ವಾರ ಅಭ್ಯಾಸ ನಡೆಸಬೇಕು ಎಂದೂ ಸಲಹೆ ನೀಡಿದೆ.

ಲಾಕ್‌ಡೌನ್‌ ಅವಧಿಯಿಂದ ಸುರಕ್ಷಿತವಾಗಿ ಆಟಕ್ಕೆ ಮರಳಲು ಸದಸ್ಯ ಮಂಡಳಿಗಳು ತಮ್ಮ ತಂಡಗಳೊಂದಿಗೆ ವೈದ್ಯಕೀಯ ಸಲಹೆಗಾರರನ್ನು ನೇಮಿಸಿಕೊಳ್ಳುವ ಬಗ್ಗೆ ಆಲೋಚಿಸಬೇಕು ಎಂದೂ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.

ಚೆಂಡಿನ ಹೊಳಪು ಕಾಪಾಡಿಕೊಳ್ಳಲು ಬೌಲರ್‌ಗಳು ಎಂಜಲು ಬಳಸುವುದನ್ನು ಇಷೇದಿಸುವುದಾಗಿಯೂ ಈಗಾಗಲೇ ಐಸಿಸಿ ಘೋಷಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು