ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC U-19 World Cup: ಮುಷೀರ್ ಮತ್ತೊಂದು ಶತಕ, ಭಾರತಕ್ಕೆ ಭಾರಿ ಜಯ

Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಅಕ್ಷರ ಗಾತ್ರ

ಬ್ಲೊಮ್‌ಫೊಂಟೀನ್: ಮಧ್ಯಮ ಕ್ರಮಾಂಕದ ಬ್ಯಾಟರ್‌ ಮುಷೀರ್ ಖಾನ್, 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿದ್ದಾರೆ. ಅವರ ಮತ್ತೊಂದು ಶತಕದ (131) ನೆರವಿನಿಂದ ಭಾರತ ತಂಡ ಮಂಗಳವಾರ ನಡೆದ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 214 ರನ್‌ಗಳ ದೊಡ್ಡ ಅಂತರದಿಂದ ಸದೆಬಡಿಯಿತು.

ಟಾಸ್‌ ಸೋತಿದ್ದ ಭಾರತ, ಮುಶೀರ್ ಅವರ ಭರ್ಜರಿ ಆಟದ ಜೊತೆಗೆ ಆರಂಭ ಆಟಗಾರ ಆದರ್ಶ್ ಸಿಂಗ್ (52, 58ಎ, 4x6) ಅವರ ಅರ್ಧ ಶತಕದ ನೆರವಿನಿಂದ 9 ವಿಕೆಟ್‌ಗೆ 295 ರನ್‌ಗಳ ಉತ್ತಮ ಮೊತ್ತ ಗಳಿಸಿತು. ನಂತರ ಎಡಗೈ ಸ್ಪಿನ್ನರ್‌ ಎಡಗೈ ಸ್ಪಿನ್ನರ್ ಸೌಮಿ ಕುಮಾರ್ ಪಾಂಡೆ (10–2–19–4) ಮತ್ತು ವೇಗದ ಬೌಲರ್ ರಾಜ್‌ ಲಿಂಬಾನಿ (17ಕ್ಕೆ2) ಅವರ ದಾಳಿಗೆ ಸಿಲುಕಿದ ಕಿವೀಸ್ ತಂಡ 29ನೇ ಓವರ್‌ನಲ್ಲಿ 81 ರನ್‌ಗಳಿಗೆ ಪತನಗೊಂಡಿತು.

ಲಿಂಬಾನಿ, ಕಿವೀಸ್ ಇನಿಂಗ್ಸ್‌ನ ಮೊದಲ ಮತ್ತು ಐದನೇ ಎಸೆತಗಳಲ್ಲಿ ವಿಕೆಟ್‌ ಪಡೆದು ಪಂದ್ಯ ಭಾರತದ ಹಿಡಿತದಲ್ಲೇ ಉಳಿಯುವಂತೆ ನೋಡಿಕೊಂಡರು. ನಂತರ ಉಪನಾಯಕನೂ ಆಗಿರುವ ಸೌಮಿ ಕುಮಾರ್, ಯಾವ ಹಂತದಲ್ಲೂ ಎದುರಾಳಿಗೆ ಚೇತರಿಸಲು ಅವಕಾಶ ನೀಡಲಿಲ್ಲ.

ಇದಕ್ಕೆ ಮೊದಲು, 18 ವರ್ಷದ ಮುಷೀರ್, ಎದುರಾಳಿಗಳ ದಾಳಿಯನ್ನು ದಂಡಿಸಿ ಈ ಪಂದ್ಯಾವಳಿಯಲ್ಲಿ ಎರಡನೇ ಶತಕ ಬಾರಿಸಿದರು. ಅವರ ಇನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿದ್ದವು. ಈ ಟೂರ್ನಿಯಲ್ಲಿ ಅವರು 300ಕ್ಕೂ ಹೆಚ್ಚು ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿದರು

ಸಂಕ್ಷಿಪ್ತ ಸ್ಕೋರ್: ಭಾರತ: 50 ಓವರುಗಳಲ್ಲಿ 8 ವಿಕೆಟ್‌ಗೆ 295 (ಆದರ್ಶ್ ಸಿಂಗ್ 52, ಮುಶೀರ್ ಖಾನ್ 131, ಉದಯ್ ಸಹಾರನ್ 35; ಮೇಸನ್ ಕ್ಲಾರ್ಕ್‌ 64ಕ್ಕೆ4); ನ್ಯೂಜಿಲೆಂಡ್‌: 28.1 ಓವರುಗಳಲ್ಲಿ 81 (ರಾಜ್ ಲಿಂಬಾಮಿ 17ಕ್ಕೆ2, ಸೌಮಿ ಕುಮಾರ್ ಪಾಂಡೆ 19ಕ್ಕೆ4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT