ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

U19 World Cup | ಅಫ್ಗಾನಿಸ್ತಾನ ವಿರುದ್ಧ ಕಿವೀಸ್‌ಗೆ ರೋಚಕ ಜಯ

Published 23 ಜನವರಿ 2024, 23:02 IST
Last Updated 23 ಜನವರಿ 2024, 23:02 IST
ಅಕ್ಷರ ಗಾತ್ರ

ಈಸ್ಟ್‌ ಲಂಡನ್ (ದಕ್ಷಿಣ ಆಫ್ರಿಕಾ): ಕುಸಿತ ನಡುವೆಯೂ ನ್ಯೂಜಿಲೆಂಡ್‌ ತಂಡ 19 ವರ್ಷದೊಳಗಿನವರ ಏಕದಿನ ವಿಶ್ವ ಕಪ್‌ ಕ್ರಿಕೆಟ್‌ ಟೂರ್ನಿಯ ರೋಚಕ ಪಂದ್ಯದಲ್ಲಿ ಮಂಗಳವಾರ ಅಫ್ಗಾನಿಸ್ತಾನ ತಂಡವನ್ನು ಒಂದು ವಿಕೆಟ್‌ನಿಂದ ಸೋಲಿಸಿತು.

‘ಡಿ’ ಗುಂಪಿನ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಗಾನಿಸ್ತಾನ 21.3 ಓವರುಗಳಲ್ಲಿ 91 ರನ್ನಿಗೆ ಉರುಳಿತು. ಮ್ಯಾಟ್‌ ರೋವ್ 21 ರನ್ನಿಗೆ ಐದು ವಿಕೆಟ್‌ ಪಡೆದು ಮಿಂಚಿದರು. ಅಫ್ಗಾನಿಸ್ತಾನ ಪ್ರತಿ ಹೋರಾಟ ತೋರಿದರೂ ಕಿವೀಸ್ ತಂಡ 28.2 ಓವರುಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 92 ರನ್ ಗಳಿಸಿ ಗುರಿತಲುಪಿತು.

ಪೊಚೆಫಸ್ಟ್ರೂಮ್‌ನಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಡಕ್‌ವರ್ತ್ ಲೂಯಿಸ್ ಆಧಾರದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡನ್ನು 36 ರನ್‌ಗಳಿಂದ ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT