ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌: ಆಫ್ರಿದಿ ಇಲೆವನ್‌ನಲ್ಲಿ ಇಲ್ಲ ಸಚಿನ್ ತೆಂಡೂಲ್ಕರ್‌, ಧೋನಿ!

Last Updated 1 ಮೇ 2019, 18:30 IST
ಅಕ್ಷರ ಗಾತ್ರ

ಬೆಂಗಳೂರು: ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ವಿಶ್ವಕಪ್‌ ಕ್ರಿಕೆಟ್‌ನ ಸಾರ್ವಕಾಲಿಕ ತಂಡವನ್ನು ಪ್ರಕಟಿಸಿದ್ದಾರೆ. ಆದರೆ ಅದಲ್ಲಿ ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಮತ್ತು ಮಹೇಂದ್ರಸಿಂಗ್ ಧೋನಿ ಅವರಿಗೆ ಸ್ಥಾನ ನೀಡಿಲ್ಲ.

ಇದಕ್ಕಾಗಿ ಆಫ್ರಿದಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯಾಗಿದೆ. ಆಫ್ರಿದಿ ತಂಡದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ ವಿರಾಟ್ ಕೊಹ್ಲಿ. ಪಾಕಿಸ್ತಾನದ ಐವರು ಮಾಜಿ ಆಟಗಾರರು ತಂಡದಲ್ಲಿದ್ದಾರೆ. ಆಸ್ಟ್ರೇಲಿಯಾದ ನಾಲ್ವರು, ದಕ್ಷಿಣ ಆಫ್ರಿಕಾದ ಒಬ್ಬ ಆಟಗಾರನಿಗೆ ಸ್ಥಾನ ಲಭಿಸಿದೆ.

‘ದಿಗ್ಗಜ ಆಟಗಾರರು ತಮ್ಮ ತಂಡದಲ್ಲಿ ಆಡುವುದಿಲ್ಲ ಎಂಬುದು ಆಫ್ರಿದಿಗೆ ಗೊತ್ತಿದೆ. ಆದ್ದರಿಂದಲೇ ಅವರು ಸಚಿನ್, ಧೋನಿಯನ್ನು ಆಯ್ಕೆ ಮಾಡಿಲ್ಲ’ ಎಂದು ಪ್ರತೀಕ್ ಅಗರವಾಲ್ ಎಂಬುವವರು ಟ್ವೀಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

‘ಆಫ್ರಿದಿಗೆ ಬ್ಯಾಟಿಂಗ್‌ನ ಎಬಿಸಿಡಿಯೂ ಗೊತ್ತಿಲ್ಲ. ಯಾವಾವೊದೋ ಕಾರಣಗಳಿಗೆ ತಮ್ಮ ತಂಡದಲ್ಲಿ ಬಹುಕಾಲದವರೆಗೆ ಆಡಿದ್ದಾರೆ. ಅವರಿಗೆ ಅಂತಿಮ 11ರ ಪಟ್ಟಿಯನ್ನು ಪ್ರಕಟಿಸಲು ಹೇಳಿದ್ದು ಯಾರು? ಅವರಿಗೆ ಐಸಿಸಿಯ ‘ಹಾಲ್ ಆಫ್ ಶೇಮ್’ ಗೌರವ ನೀಡಬೇಕು’ ಎಂದು ಗೌರವ್ ಶರ್ಮಾ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಆಫ್ರಿದಿ ಇಲೆವನ್ ಇಂತಿದೆ: ಸಯೀದ್ ಅನ್ವರ್, ಆ್ಯಡಂ ಗಿಲ್‌ಕ್ರಿಸ್ಟ್, ರಿಕಿ ಪಾಂಟಿಂಗ್, ವಿರಾಟ್ ಕೊಹ್ಲಿ, ಇಂಜಮಾಮ್ ಉಲ್ ಹಕ್, ಜಾಕ್ ಕಾಲಿಸ್, ವಾಸೀಂ ಅಕ್ರಂ, ಗ್ಲೆನ್ ಮೆಕ್‌ಗ್ರಾ ಶೇನ್ ವಾರ್ನ್, ಶೋಯಬ್ ಅಖ್ತರ್, ಸಕ್ಲೇನ್ ಮುಷ್ತಾಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT