ಲಂಡನ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಅಫ್ಗಾನಿಸ್ತಾನಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎರಡು ಓವರ್ ಮುಗಿಯುವ ಮುನ್ನವೇ ಪ್ರಮುಖ 2 ವಿಕೆಟ್ ಕಳೆದುಕೊಂಡ ಅಫ್ಗಾನ್ ಸಂಕಷ್ಟಕ್ಕೆ ಸಿಲುಕಿತು. 38ನೇ ಓವರ್ ವರೆಗೂ ಹೋರಾಟ ಮುಂದುವರಿಸಿದ ಆಟಗಾರರು 207 ರನ್ಗಳಿಸಿದರು.

ಸ್ಕೋರ್ ವಿವರ:https://bit.ly/2HNVTEh

ಆಸ್ಟ್ರೇಲಿಯಾದ ಆ್ಯರನ್ ಫಿಂಚ್ ಮತ್ತು ಅಫ್ಗಾನ್ನ ಗುಲ್ಬದೀನ್ ನೈಬ್ ಇದೇ ಮೊದಲ ಸಲ ವಿಶ್ವಕಪ್ನಲ್ಲಿ ತಂಡಗಳನ್ನು ಮುನ್ನಡೆಸುತ್ತಿದ್ದಾರೆ. ಇಬ್ಬರ ನಾಯಕತ್ವದ ಪರೀಕ್ಷೆಗೂ ಈ ಪಂದ್ಯ ವೇದಿಕೆಯಾಗಿದ್ದು, ಆಸ್ಟ್ರೇಲಿಯಾಗೆ ಸಾಧಾರಣ ಸವಾಲು ನೀಡಿದಂತಾಗಿದೆ.

ನಜಿಬುಲ್ಲಾಹ್(51), ರಶೀದ್ ಖಾನ್(27) ಹಾಗೂ ನಾಯಕಗುಲ್ಬದೀನ್ ನೈಬ್(31) ಹೋರಾಟದ ಫಲವಾಗಿ ತಂಡದ ಮೊತ್ತ 200ರ ಗಡಿ ದಾಟಿತು. 12 ಎಸೆತಗಳನ್ನು ಎದುರಿಸಿದರಶೀದ್ ಖಾನ್ ಮೂರು ಸಿಕ್ಸರ್, 2 ಬೌಂಡರಿ ಒಳಗೊಂಡಂತೆ 27 ರನ್ ಗಳಿಸಿದರು.

ಆಸ್ಟ್ರೇಲಿಯಾ ಪರ ಆ್ಯಡಮ್ ಜಂಪಾ ಹಾಗೂಪ್ಯಾಟ್ ಕಮಿನ್ಸ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಮಾರ್ಕಸ್ ಸ್ಟೊಯಿನಿಸ್ 2 ವಿಕೆಟ್ ಕಬಳಿಸಿದರು. ಪಂದ್ಯದ ಆರಂಭದಿಂದಲೂ ಆಸಿಸ್ ಬೌಲರ್ಗಳು ಅಫ್ಗಾನ್ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕುತ್ತಲೇ ಬಂದರು. ಅಂತಿಮವಾಗಿ 38.2 ಓವರ್ಗಳಲ್ಲಿ ಅಫ್ಗಾನ್ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.

ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿ ಒಂದು ವರ್ಷ ನಿಷೇಧ ಶಿಕ್ಷೆ ಪೂರೈಸಿರುವ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ.

9:05– ಒಂಬತ್ತು ವಿಕೆಟ್ ಕಳೆದುಕೊಂಡಿರುವ ಅಫ್ಗಾನ್38 ಓವರ್ ಅಂತ್ಯಕ್ಕೆ 207 ರನ್ ಗಳಿಸಿದೆ.

8:12–ಅಫ್ಗಾನಿಸ್ತಾನ:29ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 129ರನ್. ಪಂದ್ಯದಲ್ಲಿನಜಿಬುಲ್ಲಾಹ್(36)ಮೊದಲ ಸಿಕ್ಸರ್ ಸಿಡಿಸಿದರು.

8:00– 25 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 98 ರನ್.ಗುಲ್ಬದೀನ್ ನೈಬ್(15) ಹಾಗೂ ನಜಿಬುಲ್ಲಾಹ್ ಜದ್ರಾನ್(11) ಕ್ರೀಸ್ನಲ್ಲಿದ್ದಾರೆ.

7:45- ಉತ್ತಮ ಪ್ರದರ್ಶನ ತೋರುತ್ತಿದ್ದ ರಹಮತ್ ಶಾ(43), ಆ್ಯಡಮ್ ಜಂಪಾ ಬೌಲಿಂಗ್ನಲ್ಲಿ ಕ್ಯಾಟ್ ನೀಡಿ ಆಟ ಮುಗಿಸಿದರು.ಆ್ಯಡಮ್ ಜಂಪಾ 2 ವಿಕೆಟ್,ಪ್ಯಾಟ್ ಕಮಿನ್ಸ್ ಹಾಗೂ ಮಿಷೆಲ್ ಸ್ಟಾರ್ಕ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

7:20–ಆ್ಯಡಮ್ ಜಂಪಾ ಬೌಲಿಂಗ್ನಲ್ಲಿಹಸಮತ್ ಉಲ್ಲಾ ಶಾಹಿದಿ(18) ವಿಕೆಟ್ ಕಳೆದು ಕೊಂಡರು.ಅಫ್ಗಾನಿಸ್ತಾನ 15 ಓವರ್ಗಳಲ್ಲಿ3 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ.

6:30–ರಹಮತ್ ಶಾ(10) ಮತ್ತುಹಸಮತ್ ಉಲ್ಲಾ ಶಾಹಿದಿ(6) ಕ್ರೀಸ್ನಲಿದ್ದಾರೆ. ಅಫ್ಗಾನ್ 5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 19ರನ್ ಗಳಿಸಿದೆ.

6:15– ಮೊದಲ ಓವರ್ನ ಮೂರನೇ ಎಸೆತದಲ್ಲಿಯೇ ಅಫ್ಗಾನಿಸ್ತಾನ ಮೊದಲ ವಿಕೆಟ್ ಕಳೆದು ಕೊಂಡಿತು.ಮಿಷೆಲ್ ಸ್ಟಾರ್ಕ್ ದಾಳಿಗೆಮೊಹಮ್ಮದ್ ಶೆಹಜಾದ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಎರಡನೇ ಓವರ್ನಲ್ಲಿಪ್ಯಾಟ್ ಕಮಿನ್ಸ್ ಸಹ ವಿಕೆಟ್ ಪಡೆಯುವಲ್ಲಿ ಸಫಲರಾದರು.ಹಜರತ್ ಉಲ್ಲಾ ಜಜಾಯ್ ವಿಕೆಟ್ನೊಂದಿಗೆ ಎರಡನೇ ಓವರ್ ಪೂರ್ಣಗೊಳ್ಳುವ ಮೊದಲೇ ಅಫ್ಗಾನ್ನ ಎರಡು ವಿಕೆಟ್ಗಳು ಪತನಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.