ಬುಧವಾರ, ಜನವರಿ 20, 2021
29 °C
ಕನ್ನಡಿಗ, ಭಾರತ ತಂಡದ ಸೀಮಿತ ಓವರ್‌ಗಳ ತಂಡದ ಉಪನಾಯಕ ಕೆ.ಎಲ್‌.ರಾಹುಲ್ ಆಶಯ

ಅವಕಾಶ ಸಿಕ್ಕರೆ ಮೂರು ವಿಶ್ವಕಪ್‌ಗಳಲ್ಲಿ ಕೀಪಿಂಗ್‌ ಗ್ಲೌಸ್‌ ತೊಡುವೆ: ರಾಹುಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ : ಅವಕಾಶ ದೊರೆತರೆ ಮುಂದಿನ ಮೂರು ವಿಶ್ವಕಪ್‌ ಟೂರ್ನಿಯಲ್ಲಿ ಕೀಪಿಂಗ್‌ ಹೊಣೆ ಹೊರುತ್ತೇನೆ ಎಂದು ಸೀಮಿತ ಓವರ್‌ಗಳ ಮಾದರಿಯಲ್ಲಿ ಭಾರತ ಕ್ರಿಕೆಟ್‌ ತಂಡದ ಉಪನಾಯಕ ಆಗಿರುವ, ಕನ್ನಡಿಗ ಕೆ.ಎಲ್‌. ರಾಹುಲ್‌ ಹೇಳಿದ್ದಾರೆ.

ರಾಹುಲ್‌ ಅವರು ಸದ್ಯ ಸೀಮಿತ ಓವರ್‌ಗಳ ಮಾದರಿಯ ವಿಕೆಟ್‌ ಕೀಪಿಂಗ್‌ನಲ್ಲಿ ರಿಷಭ್ ಪಂತ್‌ ಹಾಗೂ ಸಂಜು ಸ್ಯಾಮ್ಸನ್‌ ಅವರನ್ನು ಹಿಂದಿಕ್ಕಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಎರಡು ಟ್ವೆಂಟಿ–20 ವಿಶ್ವಕಪ್‌ ಟೂರ್ನಿಗಳು ಹಾಗೂ ಏಕದಿನ ವಿಶ್ವಕಪ್‌ ನಡೆಯಲಿವೆ.

28 ವರ್ಷದ ಈ ರಾಹುಲ್‌ ಕೀಪಿಂಗ್‌ ಗ್ಲೌಸ್‌ ತೊಟ್ಟರೆ ತಂಡಕ್ಕೆ ಹೆಚ್ಚುವರಿ ಬ್ಯಾಟ್ಸ್‌ಮನ್‌ ಅಥವಾ ಬೌಲರ್‌ಅನ್ನು ಹೊಂದುವ ಅವಕಾಶ ಇರಲಿದೆ.

‘ತಂಡದ ಸಂಯೋಜನೆಗೆ ಒಂದಷ್ಟು ಸಹಾಯವಾಗುತ್ತದೆ ಎನ್ನುವುದಾದರೆ ನಾನು ಮುಂದಿನ ಮೂರು ವಿಶ್ವಕಪ್‌ ಟೂರ್ನಿಗಳಲ್ಲಿ ನಾನು ಕೀಪಿಂಗ್ ಜವಾಬ್ದಾರಿ ನಿಭಾಯಿಸುವುದನ್ನು ಇಷ್ಟಪಡುತ್ತೇನೆ‘ಎಂದು ರಾಹುಲ್‌ ಹೇಳಿದ್ದಾರೆ.

’ಆದರೆ ಈ ಕುರಿತು ತಂಡದ ಆಡಳಿತ ಮಂಡಳಿ ನನಗೇನೂ ಹೇಳಿಲ್ಲ. ಒಂದು ತಂಡವಾಗಿ ನಾವು ಆ ರೀತಿ ವಿಚಾರ ಮಾಡುತ್ತಿಲ್ಲ. ವಿಶ್ವಕಪ್ ಟೂರ್ನಿಗಳು ಮುಖ್ಯವಾಗುತ್ತದೆ. ಈ ಟೂರ್ನಿಗಳಿಗಾಗಿ ತಂಡಗಳು ಬಹಳಷ್ಟು ಸಿದ್ಧತೆಯನ್ನು ನಡೆಸುತ್ತವೆ. ಬ್ಯಾಟಿಂಗ್‌ ಮತ್ತು ಕೀಪಿಂಗ್‌ ಎರಡರಲ್ಲೂ ನಾನು ಸ್ಥಿರ ಪ್ರದರ್ಶನ ತೋರಿದರೆ ಹೆಚ್ಚುವರಿ ಬ್ಯಾಟ್ಸ್‌ಮನ್ ಅಥವಾ ಬೌಲರ್‌ಅನ್ನು ಹೊಂದುವ ಅವಕಾಶ ತಂಡಕ್ಕೆ ಇರುತ್ತದೆ‘ ಎಂದು ರಾಹುಲ್‌ ನುಡಿದರು.

ಏಕದಿನ ಮಾದರಿಯಲ್ಲಿ ಐದನೇ ಕ್ರಮಾಂಕದಲ್ಲಿ ಹಾಗೂ ಟಿ–20 ಪಂದ್ಯಗಳಲ್ಲಿ ಆರಂಭಿಕನಾಗಿ ರಾಹುಲ್‌ ಕಣಕ್ಕಿಳಿಯುತ್ತಾರೆ.

‘ನಾವು ಕೊನೆಯ ಬಾರಿ ಆಡಿದ್ದ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ್ದೆ. ಈ ಕ್ರಮಾಂಕ ನನಗೆ ಬಹಳಷ್ಟು ತೃಪ್ತಿ ನೀಡಿದೆ. ತಂಡ ಹೇಳುವ ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಿದ್ಧ‘ ಎಂದು ಅವರು ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು