ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮ್ರಾನ್ ಪಾಕಿಸ್ತಾನದಲ್ಲಿ ಇದ್ದಿದ್ದರೆ ಅಂ.ರಾ ತಂಡದಲ್ಲಿ ಆಡುತ್ತಿದ್ದ: ಅಕ್ಮಲ್

ಅಕ್ಷರ ಗಾತ್ರ

ಜಮ್ಮು ಕಾಶ್ಮೀರದ ಕ್ರಿಕೆಟಿಗ ಉಮ್ರಾನ್‌ ಮಲಿಕ್ ಅವರು ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ತಮ್ಮ ವೇಗದ ಬೌಲಿಂಗ್‌ ಮೂಲಕ ಗಮನ ಸೆಳೆದಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಡುತ್ತಿರುವ 22 ವರ್ಷದ ಈ ಆಟಗಾರನ ಬಗ್ಗೆ ಕ್ರಿಕೆಟ್‌ ದಿಗ್ಗಜರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್‌ ಅಕ್ಮಲ್‌, ಅವರನ್ನು ಶ್ಲಾಘಿಸಿದ್ದಾರೆ.

Paktv.tv ಯುಟ್ಯೂಬ್‌ ಚಾನೆಲ್‌ಗೆ ಮಾತನಾಡಿರುವ ಅಕ್ಮಲ್, ವೇಗಿ ಉಮ್ರಾನ್‌ ಐಪಿಎಲ್‌ನಲ್ಲಿ ಹೆಚ್ಚು ರನ್‌ ಬಿಟ್ಟುಕೊಟ್ಟಿರಬಹುದು. ಆದರೆ, ಸುಧಾರಣೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

'ಒಂದುವೇಳೆ ಆತ (ಉಮ್ರಾನ್‌) ಪಾಕಿಸ್ತಾನದಲ್ಲಿ ಇದ್ದಿದ್ದರೆ, ಬಹುಶಃ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡುತ್ತಿದ್ದ. ಆತ ಹೆಚ್ಚು ರನ್‌ ಬಿಟ್ಟುಕೊಟ್ಟಿರಬಹುದು. ಆದರೆ, ವಿಕೆಟ್‌ಗಳನ್ನು ಪಡೆಯುತ್ತಿರುವುದರಿಂದ ತಂಡದ ಪ್ರಮುಖ ವೇಗಿಯಾಗಿದ್ದಾರೆ' ಎಂದು ಅಕ್ಮಲ್‌ ಅಭಿಪ್ರಾಯಪಟ್ಟಿದ್ದಾರೆ.

'ಪ್ರತಿ ಪಂದ್ಯದ ಬಳಿಕ, ಆತನ ಬೌಲಿಂಗ್‌ ಸ್ಪೀಡ್‌ ಚಾರ್ಟ್‌ನಲ್ಲಿ ಪ್ರತಿಗಂಟೆಗೆ 155 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿರುವುದು ಕಾಣುತ್ತದೆ. ಇದು ಕಡಿಮೆಯಾಗುವುದೇ ಇಲ್ಲ. ಭಾರತ ಕ್ರಿಕೆಟ್‌ನಲ್ಲಿರುವ ಅತ್ಯುತ್ತಮವಾದ ಪೈಪೋಟಿ ಇದು. ಈ ಮೊದಲು ಭಾರತ ಕ್ರಿಕೆಟ್‌ ಗುಣಮಟ್ಟದ ವೇಗಿಗಳ ಕೊರತೆ ಎದುರಿಸಿತ್ತು. ಆದರೆ, ಈಗ ನವದೀಪ್‌ ಸೈನಿ, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರಂತಹ ಸಾಕಷ್ಟು ವೇಗಿಗಳು ಇದ್ದಾರೆ' ಎಂದು ಹೇಳಿದ್ದಾರೆ.

ಸದ್ಯ ಈ ಬಾರಿಯ ಐಪಿಎಲ್‌ನಲ್ಲಿ 157 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡಿರುವ ಉಮ್ರಾನ್‌, ಅತ್ಯಂತ ವೇಗದ ಎಸೆತ ಹಾಕಿದ ಬೌಲರ್ ಎನಿಸಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ಅವರು 12 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದು, 18 ವಿಕೆಟ್ ಉರುಳಿಸಿದ್ದಾರೆ.

ಕಮ್ರಾನ್‌, ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ (2008) ಪ್ರಶಸ್ತಿ ಗೆದ್ದಿದ್ದ ರಾಜಸ್ಥಾನ ರಾಯಲ್ಸ್‌ ತಂಡದ ಪರ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT