ನವದೆಹಲಿ: ಬ್ಯಾಟಿಂಗ್ ಕ್ರಮಾಂಕದಲ್ಲಿ ಏನೇ ಬದಲಾವಣೆ ಆದರೂ ಅದಕ್ಕೆ ಹೊಂದಿಕೊಂಡು ಕೆ.ಎಲ್.ರಾಹುಲ್ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಆದರೆ ಕೆಳ ಕ್ರಮಾಂಕದ ಬದಲು ಮೇಲಿನ ಕ್ರಮಾಂಕಗಳಲ್ಲಿ ಆಡುವುದು ತಮಗೆ ‘ಹೆಚ್ಚು ಆರಾಮ’ ನೀಡುತ್ತದೆ ಎಂದು ಈ ಆಕರ್ಷಕ ಶೈಲಿಯ ಬ್ಯಾಟರ್ ಹೇಳುತ್ತಾರೆ.

ಸಾಮಾನ್ಯವಾಗಿ ಐದನೇ ಕ್ರಮಾಂಕದಲ್ಲಿ ಆಡುತ್ತಿದ್ದ ರಾಹುಲ್ ಅವರನ್ನು ಇತ್ತೀಚಿನ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆರನೇ ಕ್ರಮಾಂಕಕ್ಕೆ ಇಳಿಸಲಾಗಿತ್ತು. ಅವರು ದುಬೈನಲ್ಲಿ ಆಡಿದ ಐದು ಪಂದ್ಯಗಳಲ್ಲಿ 174 ರನ್ ಗಳಿಸಿದ್ದರು. ಇದು, ಸವಾಲು ಸ್ವೀಕರಿಸಲು ಅವರು ನಡೆಸಿದ ಸಿದ್ಧತೆ ಮತ್ತು ತೋರಿದ ಬದ್ಧತೆಗೆ ಕನ್ನಡಿಯಾಗಿತ್ತು.

‘ನಾನು ಮೇಲಿನ ಕ್ರಮಾಂಕದಲ್ಲಿ ಆಡಿ ಬೆಳೆದವನು. 11ನೇ ವಯಸ್ಸಿನಲ್ಲಿ ಮಂಗಳೂರಿನಲ್ಲಿ ನನ್ನ ಮೊದಲ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ ದಿನಗಳಿಂದ ಹಿಡಿದು ಭಾರತಕ್ಕೆ ಆಡಿದ ಮೊದಲ ಕೆಲವು ವರ್ಷ ಅಗ್ರ ಕ್ರಮಾಂಕಗಳಲ್ಲೇ ಆಡಿದ್ದೆ. ಈ ಕ್ರಮಾಂಕದಲ್ಲಿ ಆಡುವುದು ನನಗೆ ಹೆಚ್ಚು ಹಿತಾನುಭವ ನೀಡುತ್ತದೆ ಮತ್ತು ನನ್ನ ಆಟಕ್ಕೆ ಸಹಜ ಸ್ಥಾನವೆನಿಸುವ ಭಾವನೆ ಮೂಡಿಸುತ್ತದೆ’ ಎಂದರು.

‘ಆದರೆ ತಂಡವಾಗಿ ಆಡುವ ಕ್ರೀಡೆಗಳಲ್ಲಿ, ಪ್ರತಿ ಬಾರಿ ನಾವು ಬಯಸಿದ ಸ್ಥಾನ ನೀಡಲು ಸಾಧ್ಯ ಆಗುವುದಿಲ್ಲ. ನಾವು ತಂಡಕ್ಕೆ ಅಗತ್ಯಕ್ಕೆ ತಕ್ಕಂತೆ ನಮ್ಮನ್ನು ಒಗ್ಗಿಸಿಕೊಳ್ಳಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಾನು ಈ ಸವಾಲುಗಳಿಗೆ ಹೊಂದಿಕೊಳ್ಳುವುದನ್ನು ಕಲಿತಿದ್ದು, ನನಗೆ ವಹಿಸಿದ ಪಾತ್ರದಲ್ಲಿ ಸಾಧ್ಯವಾದಷ್ಟು ಉತ್ತಮವಾಗಿ ಆಡುತ್ತಿದ್ದೇನೆ’ ಎಂದು ಅವರು ಜಿಯೊ ಹಾಟ್ಸ್ಟಾರ್ ಜೊತೆಗಿನ ಸಂವಾದದಲ್ಲಿ ತಿಳಿಸಿದರು.

ಈ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳನ್ನು ಮುನ್ನಡೆಸಿದ್ದ ಕರ್ನಾಟಕದ ಈ ಆಟಗಾರ, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದು, ನಾಯಕತ್ವದ ಕೊಡುಗೆ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುನ್ನಡೆಸುವ ಹೊಣೆ ಅಕ್ಷರ್ ಪಟೇಲ್ ಹೆಗಲಿಗೆ ಬೀಳುವ ಸಾಧ್ಯತೆಯಿದೆ.

ಐಪಿಎಲ್ ಹರಾಜಿಗೆ ಸಂಬಂಧಿಸಿ ಮಾತನಾಡಿದ ಅವರು, ‘ಇದು ಕ್ರಿಕೆಟ್ಲ್ಲಿ ಆಟಗಾರನ ಭವಿಷ್ಯದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ’ ಎಂದರು. ‘ಕಳೆದ ಮೂರು ಋತುಗಳಿಂದ ನಾಯಕನಾಗಿರುವ ಕಾರಣ ತಂಡ ಕಟ್ಟುವ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದೇನೆ. ತಂಡ ರೂಪಿಸುವಾಗ ಫ್ರಾಂಚೈಸಿಗಳು ಎದುರಿಸುವ ಒತ್ತಡವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಆಟಗಾರರನ್ನು ಗಮನದಲ್ಲಿಟ್ಟುಕೊಂಡಾಗ ಅವರ ಸ್ಥಿತಿ ಇನ್ನೂ ಕಠಿಣ. ಅಲ್ಲಿ ಅವರ ಭವಿಷ್ಯವೇ ಪಣಕ್ಕಿರುತ್ತದೆ. ಹರಾಜು ಆಟಗಾರನೊಬ್ಬನ ಭವಿಷ್ಯ ರೂಪಿಸುತ್ತದೆ ಅಥವಾ ಅವನ ಮುಂದೆ ಅನಿರೀಕ್ಷಿತ ಸವಾಲುಗಳನ್ನು ತಂದಿಡುತ್ತದೆ’ ಎಂದರು.

ಲಖನೌ ಸೂಪರ್ ಕಿಂಗ್ಸ್ನಲ್ಲಿ ಹೋದ ಬಾರಿಯ ಐಪಿಎಲ್ ರಾಹುಲ್ ಪಾಲಿಗೆ ಹಿತಕರ ಎನಿಸಿರಲಿಲ್ಲ. ಈಗ ಕ್ಯಾಪಿಟಲ್ಸ್ನಲ್ಲಿ ಅವರು ಹೊಸದಾಗಿ ಸವಾಲು ಎದುರಿಸಬೇಕಾಗಿದೆ.

‘ಡೆಲ್ಲಿ ತಂಡದಲ್ಲಿರುವ ಮಿಚೆಲ್ ಸ್ಟಾರ್ಕ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮೊದಲಾದ ಆಟಗಾರರ ಜೊತೆ ಈ ಹಿಂದೆ ನಾನು ಆಡಿದ್ದು, ನಮ್ಮ ತಂಡ ಪ್ರಬಲವಾಗಿದೆ. ಐಪಿಎಲ್ ಆರಂಭಕ್ಕೆ ಕಾತರನಾಗಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.