ಕಾನ್ಪುರ: ಟೀಮ್ ಇಂಡಿಯಾ ಸ್ವದೇಶದಲ್ಲಿ ಸತತ 18ನೇ ಟೆಸ್ಟ್ ಸರಣಿ ಜಯದ ಸಿಹಿ ಸವಿದಿದೆ. ಕಾನ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಜಯ ಗಳಿಸಿದ ಭಾರತ ತಂಡವು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಇದರೊಂದಿಗೆ 2013ರಿಂದ 2024ರ ಅವಧಿಯಲ್ಲಿ ಟೀಮ್ ಇಂಡಿಯಾ ತವರು ನೆಲದಲ್ಲಿ ಸತತ 18ನೇ ಸರಣಿ ಜಯ ದಾಖಲಿಸಿದೆ. ಆ ಮೂಲಕ ಟೀಮ್ ಇಂಡಿಯಾವು ಸ್ವದೇಶದಲ್ಲಿ ಬಲಿಷ್ಠ ತಂಡವೆನಿಸಿದೆ.
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 1994ರಿಂದ 2000ರ ಅವಧಿಯಲ್ಲಿ ಸ್ವದೇಶದಲ್ಲಿ ಸತತ 10 ಟೆಸ್ಟ್ ಸರಣಿಗಳಲ್ಲಿ ಜಯಿಸಿತ್ತು. ಇದೇ ಸಾಧನೆಯನ್ನು 2004-2008ರ ಅವಧಿಯಲ್ಲೂ ಆಸ್ಟ್ರೇಲಿಯಾ ಪುನರಾವರ್ತಿಸಿತ್ತು.
ಸ್ವದೇಶದಲ್ಲಿ ಸತತವಾಗಿ ಅತಿ ಹೆಚ್ಚು ಟೆಸ್ಟ್ ಸರಣಿ ಜಯಿಸಿದ ತಂಡಗಳ ಪಟ್ಟಿ:
ಭಾರತ: 18 (2013-2024)
ಆಸ್ಟ್ರೇಲಿಯಾ: 10 (1994-2000)
ಆಸ್ಟ್ರೇಲಿಯಾ: 10 (2004-2008)
ವೆಸ್ಟ್ ಇಂಡೀಸ್: 8 (1976-1986)
ನ್ಯೂಜಿಲೆಂಡ್: 8 (2017-2020)
ಟೀಮ್ ಇಂಡಿಯಾ
(ಪಿಟಿಐ ಚಿತ್ರ)
180ನೇ ಟೆಸ್ಟ್ ಗೆಲುವು...
ಭಾರತ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ 180ನೇ ಗೆಲುವು ದಾಖಲಿಸಿದೆ. ಆ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಜಯ ಗಳಿಸಿದ ತಂಡಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಮೀರಿಸಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಜಯ ಗಳಿಸಿದ ತಂಡಗಳು:
ಆಸ್ಟ್ರೇಲಿಯಾ: 414
ಇಂಗ್ಲೆಂಡ್: 397
ವೆಸ್ಟ್‌ಇಂಡೀಸ್: 183
ಭಾರತ: 180
ದಕ್ಷಿಣ ಆಫ್ರಿಕಾ: 179
ದಾಖಲೆ ರನ್‌ರೇಟ್...
ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್-ರೇಟ್ ಕಾಯ್ದುಕೊಂಡ ತಂಡವೆಂಬ ಖ್ಯಾತಿಗೂ (7.36) ಟೀಮ್ ಇಂಡಿಯಾ ಪಾತ್ರವಾಗಿದೆ. ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಗರಿಷ್ಠ ರನ್‌ರೇಟ್ (4.39) ಕೂಡ ಕಾನ್ಪುರದಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.