IND vs ENG 1st Test: ತಂಡವನ್ನು ಹುರಿದುಂಬಿಸಿದ ಕ್ಯಾಪ್ಟನ್ ಕೊಹ್ಲಿ

ಚೆನ್ನೈ: ಎಂಎ ಚಿದಂಬರಂ ಮೈದಾನದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಆರಂಭಕ್ಕೂ ಮೊದಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಸಹ ಆಟಗಾರರನ್ನು ಹುರಿದುಂಬಿಸುವ ಮೂಲಕ ಗಮನ ಸೆಳೆದರು.
ಈ ವಿಡಿಯೊವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಇದನ್ನೂ ಓದಿ: IND vs ENG: ಕೊಹ್ಲಿ ಕ್ರೀಡಾ ಸ್ಫೂರ್ತಿಗೆ ಬಿಸಿಸಿಐ ಮೆಚ್ಚುಗೆ
ಮೊದಲ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ ಮೂರು ವಿಕೆಟ್ ನಷ್ಟಕ್ಕೆ 263 ರನ್ ಪೇರಿಸಿತ್ತು. 100ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಜೋ ರೂಟ್, ಅಮೋಘ ಶತಕ ಬಾರಿಸಿದ್ದರು. ಇದರಿಂದಾಗಿ ತಂಡದ ಮನೋಬಲ ಕುಸಿಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಹ ಆಟಗಾರರಿಗೆ ಕ್ಯಾಪ್ಟನ್ ಕೊಹ್ಲಿ ಸ್ಫೂರ್ತಿ ತುಂಬಿದರು.
Rise and shine ☀️
We are building up to DAY 2️⃣ here at Chepauk #TeamIndia 🇮🇳 #INDvENG @Paytm pic.twitter.com/siebtqIW0c
— BCCI (@BCCI) February 6, 2021
ಧೋನಿ ಹಾದಿಯಲ್ಲಿ ಕೊಹ್ಲಿ...
ಈ ಮೊದಲು ಮೊದಲ ದಿನದಾಟದಲ್ಲಿ ಸ್ನಾಯುಸೆಳೆತಕ್ಕೊಳಗಾಗಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಅವರಿಗೆ ನೆರವಾಗುವ ಮೂಲಕ ವಿರಾಟ್ ಕೊಹ್ಲಿ ಅವರು ಮಾಜಿ ಕೂಲ್ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅವರನ್ನು ಅನುಕರಿಸಿದ್ದರು.
ಹಿಂದೊಮ್ಮೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಸ್ನಾಯು ಸೆಳೆತಕ್ಕೊಳಗಾದ ಧೋನಿ ನೆರವು ಮಾಡಿದ್ದರು. ಈ ವಿಡಿಯೊಗಳ ಮಿಶ್ರಣವನ್ನು ಬಿಸಿಸಿಐ ಹಂಚಿಕೊಂಡಿದೆ. ಈಗ ಧೋನಿ ಅವರಂತೆ ವಿರಾಟ್ ಕೊಹ್ಲಿ ಸಹ ಕ್ರೀಡಾಸ್ಫೂರ್ತಿ ಮೆರೆದು ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದ್ದಾರೆ.
Class Act! 👏👏
Respect your opposition, the @msdhoni and @imVkohli way! 👏 #SpiritofCricket #TeamIndia
Watch 🎥👇
— BCCI (@BCCI) February 5, 2021
ಪಂತ್ ಮಾತುಗಾರಿಕೆ...
ಏತನ್ಮಧ್ಯೆ ಸ್ಟಂಪ್ ಮೈಕ್‌ನಲ್ಲಿ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಮಾತುಗಾರಿಕೆಯು ಸೆರೆಯಾಗಿದೆ. ತಮಾಷೆಭರಿತ ಪಂತ್ ಮಾತುಗಳು ಅಭಿಮಾನಿಗಳಲ್ಲೂ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: India vs England|100ನೇ ಟೆಸ್ಟ್ನಲ್ಲಿ ಶತಕ ಬಾರಿಸಿದ ಜೋ ರೂಟ್ ಸ್ಮರಣೀಯ ದಾಖಲೆ
ವಾಷಿಂಗ್ಟನ್ ಸುಂದರ್ ದಾಳಿ ಮಾಡುತ್ತಿದ್ದ ಸಂದರ್ಭದಲ್ಲಿ 'ನನ್ನ ಹೆಸರು ವಾಷ್ಟಿಂಗನ್, ನಾನು ಡಿಸಿಗೆ ಹೋಗಲು ಬಯಸುತ್ತೇನೆ' ಎಂಬ ಪಂತ್ ಹೇಳಿಕೆಯು ವೈರಲ್ ಆಗಿದೆ.
A peppy Pant behind the stumps https://t.co/KBLPB4kYRi via @bcci
— Nagaraja Bela (@nagubela) February 6, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.