ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಇಂಗ್ಲೆಂಡ್ 432ಕ್ಕೆ ಆಲೌಟ್, 354 ರನ್‌ಗಳ ಬೃಹತ್ ಮುನ್ನಡೆ

Last Updated 27 ಆಗಸ್ಟ್ 2021, 10:51 IST
ಅಕ್ಷರ ಗಾತ್ರ

ಲೀಡ್ಸ್: ಭಾರತ ವಿರುದ್ಧ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 432 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 354 ರನ್‌ಗಳ ಬೃಹತ್ ಮುನ್ನಡೆ ಗಳಿಸಿದೆ.

ಎಂಟು ವಿಕೆಟ್ ನಷ್ಟಕ್ಕೆ 423 ರನ್ ಎಂಬ ಸ್ಕೋರ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಆಂಗ್ಲರ ಪಡೆ ಮತ್ತಷ್ಟು ಒಂಬತ್ತು ರನ್ ಪೇರಿಸುವಷ್ಟರಲ್ಲಿ ಉಳಿದಿರುವ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಕ್ರೇಗ್ ಓವರ್ಟನ್ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಎರಡನೇ ದಿನದಾಟದಲ್ಲಿ ನಾಯಕ ಜೋ ರೂಟ್ ಭರ್ಜರಿ ಶತಕ ಗಳಿಸಿದರು. 165 ಎಸೆತಗಳನ್ನು ಎದುರಿಸಿದ ರೂಟ್ 14 ಬೌಂಡರಿಗಳ ನೆರವಿನಿಂದ 121 ರನ್ ಗಳಿಸಿದರು. ಈ ಮೂಲಕ ಪ್ರಸಕ್ತ ಸರಣಿಯಲ್ಲಿ 'ಹ್ಯಾಟ್ರಿಕ್' ಶತಕ ಸಾಧನೆ ಮಾಡಿದರು.

ಆರಂಭಿಕರಾದ ರೋರಿ ಬರ್ನ್ಸ್ (61), ಹಸೀಬ್ ಹಮೀದ್ (68) ಹಾಗೂ ಡೇವಿಡ್ ಮಲಾನ್ (70) ಆಕರ್ಷಕ ಅರ್ಧಶತಕ ಗಳಿಸಿದರು. ಭಾರತದ ಪರ ಮೊಹಮ್ಮದ್ ಶಮಿ ನಾಲ್ಕು ಮತ್ತು ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು.

ಮೊದಲ ದಿನದಾಟದಲ್ಲಿ ಜೇಮ್ಸ್ ಆ್ಯಂಡರ್ಸನ್ (6ಕ್ಕೆ 3 ವಿಕೆಟ್) ಹಾಗೂ ಕ್ರೇಗ್ ಓವರ್ಟನ್ (14ಕ್ಕೆ 3 ವಿಕೆಟ್) ದಾಳಿಗೆ ತತ್ತರಿಸಿದ ವಿರಾಟ್ ಕೊಹ್ಲಿ ಬಳಗ 78 ರನ್‌ಗಳಿಗೆ ಆಲೌಟ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT