ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಮೊಟೇರಾದಲ್ಲಿ ರನ್ ಹೊಳೆ, ಇಂಗ್ಲೆಂಡ್‌ಗೆ 225 ರನ್ ಟಾರ್ಗೆಟ್

Last Updated 20 ಮಾರ್ಚ್ 2021, 15:45 IST
ಅಕ್ಷರ ಗಾತ್ರ

ಅಹಮದಾಬಾದ್: ಮೊಟೇರಾದ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 5ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ 224 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ.

ನಾಯಕ ವಿರಾಟ್ ಕೊಹ್ಲಿ(80) ಅವರ ಜವಾಬ್ದಾರಿಯುತ ಆಟ, ರೋಹಿತ್ ಶರ್ಮಾ(64), ಸೂರ್ಯ ಕುಮಾರ್ ಯಾದವ್(32) ಮತ್ತು ಹಾರ್ದಿಕ್ ಪಾಂಡ್ಯ(39) ಅವರ ಸ್ಫೋಟಕ ಆಟದ ನೆರವಿನಿಂದ ಆಂಗ್ಲರಿಗೆ 225 ರನ್‌ಗಳ ಟಾರ್ಗೆಟ್ ನೀಡಿದೆ.

ಮತ್ತೆ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಬ್ಯಾಟಿಂಗ್ ಆರಂಭಿಸಿದರು. ಇಂಗ್ಲೆಂಡ್ ಲೆಕ್ಕಾಚಾರ ತಿರುಗುಮುರುಗಾಗುವಂತೆ ಬ್ಯಾಟ್ ಬೀಸಿದ ರೋಹಿತ್, 34 ಎಸೆತಗಳಲ್ಲಿ 64 ರನ್ ಸಿಡಿಸಿ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿದರು. ಇದರಲ್ಲಿ ಅಮೋಘ 5 ಸಿಕ್ಸರ್ ಮತ್ತು 4 ಬೌಂಡರಿಗಳಿದ್ದವು.

ರೋಹಿತ್ ಶರ್ಮಾ ನಿರ್ಗಮನದ ಬಳಿಕ ನಾಯಕನ ಜೊತೆ ಸೇರಿದ ಸೂರ್ಯ ಕುಮಾರ್ ಯಾದವ್ ಮಿಂಚಿನ ಬ್ಯಾಟಿಂಗ್ ಮಾಡಿದರು. 17 ಎಸೆತಗಳಲ್ಲಿ 32 ರನ್ ಸಿಡಿಸಿ ಜೋರ್ಡನ್ ಮತ್ತು ಜೇಸನ್ ರಾಯ್ ಅವರ ಅದ್ಬುತ ಫೀಲ್ಡಿಂಗ್‌ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಮತ್ತೊಂದೆಡೆ ಗಟ್ಟಿಯಾಗಿ ನಿಂತಿದ್ದ ವಿರಾಟ್ ಕೊಹ್ಲಿ ಅಜೇಯ 80 ರನ್ ಸಿಡಿಸಿ ಅಬ್ಬರಿಸಿದರು. ಇದರಲ್ಲಿ ಎರಡು ಸಿಕ್ಸರ್ ಮತ್ತು 7 ಬೌಂಡರಿಗಳಿದ್ದವು.

ಇದಕ್ಕೂ ಮುನ್ನ, ಸೂರ್ಯ ಕುಮಾರ್ ಯಾದವ್ ನಿರ್ಗಮನದ ಬಳಿಕ ನಾಯಕನ ಜೊತೆ ಸೇರಿದ ಹಾರ್ದಿಕ್ ರನ್ ಮಳೆ ಸುರಿಸಿದರು. 17 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 229.41ಸ್ಟ್ರೈಕ್ ರೇಟ್‌ನಲ್ಲಿ 39 ರನ್ ಸಿಡಿಸಿದರು.

ಅಂತಿಮವಾಗಿ 20 ಓವರ್ ಅಂತ್ಯಕ್ಕೆ ಭಾರತ 2 ವಿಕೆಟ್ ಕಳೆದುಕೊಂಡು 224 ರನ್ ಕಲೆ ಹಾಕಿತು.ಇದು ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಗಳಿಸಿದ ಅತ್ಯಧಿಕ ಮೊತ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT