ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಗೆಲುವಿನ ಸನಿಹದಲ್ಲಿ ಭಾರತ; ಅಶ್ವಿನ್‌ಗೆ 5 ವಿಕೆಟ್‌

Published 9 ಮಾರ್ಚ್ 2024, 7:33 IST
Last Updated 9 ಮಾರ್ಚ್ 2024, 7:33 IST
ಅಕ್ಷರ ಗಾತ್ರ

ಧರ್ಮಶಾಲಾ: ಹಿಮಾಲಯದ ಮಡಿಲಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್‌ ಅಶ್ವಿನ್‌ 5 ವಿಕೆಟ್‌ ಪಡೆದಿದ್ದಾರೆ.

ಭಾರತ ಈ ಪಂದ್ಯದ ಗೆಲುವಿನ ಸನಿಹದಲ್ಲಿದೆ. 

ಈ ಟೆಸ್ಟ್‌ ಪಂದ್ಯದಲ್ಲಿ ರವಿಚಂದ್ರನ್‌ ಅಶ್ವಿನ್‌ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಪಡೆದಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲೂ 5 ವಿಕೆಟ್‌ ಪಡೆದಿದ್ದಾರೆ.‌

ಈ ಕ್ರೀಡಾಂಗಣದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ಆಟಗಾರರ ದುರ್ಬಲ ಬ್ಯಾಟಿಂಗ್‌ ಹಾಗೂ ಕ್ಷೇತ್ರರಕ್ಷಣೆಯು ಅವರ ನೈತಿಕ ಬಲ ಕುಸಿದಿರುವುದರ ಸಂಕೇತದಂತೆ ಕಾಣುತ್ತಿದೆ. 

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗಳಿಗೆ ಆಲೌಟ್‌ ಆಗಿತ್ತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 477 ರನ್‌ ಪೇರಿಸುವ ಮೂಲಕ ಭಾರಿ ಮುನ್ನಡೆ ಪಡೆದಿತ್ತು. ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ನಲ್ಲೂ ಕುಸಿತ ಕಂಡಿದೆ.

ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ನಲ್ಲಿ ಈ ವೇಳೆಗೆ 141 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡಿದೆ. 118 ರನ್‌ಗಳ ಹಿನ್ನಡೆ ಅನುಭವಿಸಿದೆ.

ಸ್ಕೋರ್‌...

ಇಂಗ್ಲೆಂಡ್‌: 218–10 ಮತ್ತು 141–6

ಭಾರತ: 477–10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT