ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಜೋ ರೂಟ್ 6.2-3-8-5: ಅವಿಸ್ಮರಣೀಯ ಸಾಧನೆ

Last Updated 25 ಫೆಬ್ರುವರಿ 2021, 12:04 IST
ಅಕ್ಷರ ಗಾತ್ರ

ಅಹಮದಾಬಾದ್: ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದ್ದಾರೆ.

ಭಾರತ ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಅವಿಸ್ಮರಣೀಯ ದಾಖಲೆ ಬರೆದರು.

ಪರಿಣಾಮ ಮೂರು ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ ತಂಡವು ಎರಡನೇ ದಿನದಾಟದಲ್ಲಿ 145 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಕೇವಲ 6.2 ಓವರ್‌ಗಳಲ್ಲಿ ಎಂಟು ರನ್ ಮಾತ್ರ ತೆತ್ತ ಜೋ ರೂಟ್ ಜೀವನಶ್ರೇಷ್ಠ ಐದು ವಿಕೆಟ್ ಸಾಧನೆ ಮಾಡಿದರು. ಇದರಲ್ಲಿ ಮೂರು ಮೇಡನ್ ಓವರ್‌ಗಳು ಸೇರಿದ್ದವು.

ಅರೆಕಾಲಿಕ ಬೌಲರ್ ಆಗಿರುವ ಹೊರತಾಗಿಯೂ ಭಾರತೀಯ ಪಿಚ್‌ಗೆ ಹೊಂದಿಕೊಂಡು ತಮ್ಮ ಕೈಚಳಕ ಪ್ರದರ್ಶಿಸುವಲ್ಲಿ ರೂಟ್ ಯಶಸ್ವಿಯಾಗಿದ್ದಾರೆ. ಅಲ್ಲದೆ ಇಂಗ್ಲೆಂಡ್ ನಾಯಕರ ಪೈಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಬಿರುದಿಗೆ ಪಾತ್ರರಾದರು.

ಅಷ್ಟೇ ಯಾಕೆ 1982ನೇ ಇಸವಿಯಲ್ಲಿ ಬಾಬ್ ವಿಲ್ಲೀಸ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಪಡೆದ ಇಂಗ್ಲೆಂಡ್‌ನ ಮೊದಲ ನಾಯಕ ಎಂಬ ದಾಖಲೆಗೂ ಭಾಜನರಾಗಿದ್ದಾರೆ.

1924ನೇ ಇಸವಿಯಲ್ಲಿ ಇಂಗ್ಲೆಂಡ್‌ನ ಅರ್ಥುರ್ ಗಿಲ್ಲಿಗಾನ್ ಏಳು ರನ್ನಿಗೆ ಆರು ವಿಕೆಟ್ ಪಡೆದಿದ್ದರು. ಈಗ ಸರಿ ಸುಮಾರು 97 ವರ್ಷಗಳ ಬಳಿಕ ಅತಿ ಕಡಿಮೆ ರನ್ನಿಗೆ ಐದು ವಿಕೆಟ್ ಪಡೆದ ಹಿರಿಮೆಗೆ ಜೋ ರೂಟ್ ಪಾತ್ರವಾಗಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ನಾಯಕರ ಶ್ರೇಷ್ಠ ಬೌಲಿಂಗ್ ಸಾಧನೆ:
7-80, ಗುಬಿ ಅಲೆನ್ (1936), ಭಾರತ ವಿರುದ್ಧ, ಓವಲ್.
6-7, ಅರ್ಥುರ್ ಗಿಲ್ಲಿಗಾನ್ (1924), ದ. ಆಫ್ರಿಕಾ ವಿರುದ್ದ, ಎಡ್ಜ್‌ಬಾಸ್ಟನ್.
6-101, ಬಾಬ್ ವಿಲ್ಲೀಸ್, ಭಾರತ ವಿರುದ್ಧ (1982), ಲಾರ್ಡ್ಸ್.
5-8, ಜೋ ರೂಟ್, ಭಾರತ ವಿರುದ್ಧ (2021), ಅಹಮದಾಬಾದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT