ಲಂಡನ್: ಪ್ರವಾಸಿ ಭಾರತ ತಂಡದ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ.

14 ಮಂದಿ ಸದಸ್ಯರ ಇಂಗ್ಲೆಂಡ್ ತಂಡವನ್ನು ಬೆನ್ ಸ್ಟೋಕ್ಸ್ ಮುನ್ನಡೆಸಲಿದ್ದಾರೆ. ಅನುಭವಿ ವೇಗದ ಬೌಲರ್ ಕ್ರಿಸ್ ವೋಕ್ಸ್ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.

36 ವರ್ಷದ ವೋಕ್ಸ್ 57 ಟೆಸ್ಟ್ ಪಂದ್ಯಗಳಲ್ಲಿ 186 ವಿಕೆಟ್ ಹಾಗೂ 1,970 ರನ್ ಗಳಿಸಿದ್ದಾರೆ. 2018ರ ಸರಣಿಯಲ್ಲಿ ಭಾರತ ವಿರುದ್ಧ ಲಾರ್ಡ್ಸ್ ಟೆಸ್ಟ್ ಪಂದ್ಯ ಗೆಲುವಿನಲ್ಲಿ (137* ರನ್, 4 ವಿಕೆಟ್) ಮಹತ್ವದ ಪಾತ್ರ ವಹಿಸಿದ್ದರು. ವೋಕ್ಸ್ ನೆರವಿನಿಂದ ಇಂಗ್ಲೆಂಡ್ ಇನಿಂಗ್ಸ್ ಹಾಗೂ 159 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.

ಜೇಮಿ ಓವರ್ಟನ್ ಸಹ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಮೊದಲ ಟೆಸ್ಟ್ ಪಂದ್ಯವು ಜೂನ್ 20ರಂದು ಲೀಡ್ಸ್ನಲ್ಲಿ ನಡೆಯಲಿದೆ.

ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಇಂತಿದೆ:

ಬೆನ್ ಸ್ಟೋಕ್ಸ್ (ನಾಯಕ), ಶೋಯಬ್ ಬಷೀರ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಸ್ಯಾಮ್ ಕುಕ್, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಜೇಮಿ ಓವರ್ಟನ್, ಒಲ್ಲಿ ಪೋಪ್, ಜೋ ರೂಟ್, ಜೇಮಿ ಸ್ಮಿತ್, ಜೋಶ್ ಟಂಗ್ ಮತ್ತು ಕ್ರಿಸ್ ವೋಕ್ಸ್.

ಮತ್ತೊಂದೆಡೆ ಭಾರತದ ಯುವ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ.

ಐದು ಪಂದ್ಯಗಳ ಟೆಸ್ಟ್ ಸರಣಿ ವೇಳಾಪಟ್ಟಿ ಇಂತಿದೆ:

ಮೊದಲ ಟೆಸ್ಟ್: ಜೂನ್ 20ರಿಂದ 24, ಲೀಡ್ಸ್

2ನೆ ಟೆಸ್ಟ್: ಜುಲೈ 2ರಿಂದ 6, ಬರ್ಮಿಂಗ್ಹ್ಯಾಮ್

3ನೇ ಟೆಸ್ಟ್: ಜುಲೈ 10ರಿಂದ 14, ಲಂಡನ್

4ನೇ ಟೆಸ್ಟ್: ಜುಲೈ 23ರಿಂದ 27, ಮ್ಯಾಂಚೆಸ್ಟರ್

ಅಂತಿಮ ಟೆಸ್ಟ್: ಜುಲೈ 31ರಿಂದ ಆಗಸ್ಟ್ 4, ಲಂಡನ್

.Bengaluru Stampede | ಸಂಭ್ರಮವಲ್ಲ, ಶೋಕಸಾಗರ: 11 ಸಾವು.Bengaluru Stampede | ಹೆಣದ ಮೇಲೆ ಬಿಜೆಪಿ ರಾಜಕೀಯ: ಡಿಕೆಶಿ ಕಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.