ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA 1st T20I: ಭಾರತಕ್ಕೆ 107 ರನ್‌ಗಳ ಸುಲಭ ಗುರಿ

Last Updated 28 ಸೆಪ್ಟೆಂಬರ್ 2022, 15:43 IST
ಅಕ್ಷರ ಗಾತ್ರ

ತಿರುವನಂತಪುರ: ಆರ್ಷದೀಪ್ ಸಿಂಗ್, ದೀಪಕ್ ಚಾಹರ್ ಮತ್ತು ಹರ್ಷಲ್ ಪಟೇಲ್ ನಿಖರ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕಾ ಎಂಟು ವಿಕೆಟ್ ನಷ್ಟಕ್ಕೆ 106 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಈ ಮೂಲಕತಿರುವನಂತಪುರದಲ್ಲಿ ಬುಧವಾರ ನಡೆಯುತ್ತಿರುವ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತ 107 ರನ್‌ಗಳ ಸುಲಭ ಗುರಿ ಪಡೆದಿದೆ.

ಆರ್ಷದೀಪ್ ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಗಳಿಸಿ ಮಿಂಚಿದರು. ಚಾಹರ್ ಹಾಗೂ ಹರ್ಷಲ್ ತಲಾ ಎರಡು ವಿಕೆಟ್ ಗಳಿಸಿದರು.

ಅಶ್ವಿನ್ ತಮ್ಮ ನಾಲ್ಕು ಓವರ್‌ಗಳಲ್ಲಿ ಎಂಟು ರನ್ ಮಾತ್ರ ಬಿಟ್ಟುಕೊಟ್ಟು ಪರಿಣಾಮಕಾರಿಯೆನಿಸಿದರು. ಮಗದೊಂದು ವಿಕೆಟ್ ಅಕ್ಷರ್ ಪಟೇಲ್ ಪಾಲಾಯಿತು.

ದಕ್ಷಿಣ ಆಫ್ರಿಕಾ ಪರ ಮೂವರು ಬ್ಯಾಟರ್ ಹೊರತುಪಡಿಸಿದ ಇತರೆ ಯಾವ ಬ್ಯಾಟರ್ ಎರಡಂಕಿ ತಲುಪಲು ವಿಫಲರಾದರು. ಒಂಬತ್ತನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಕೇಶವ್ ಮಹಾರಾಜ್ ಗರಿಷ್ಠ 41 ರನ್ ಗಳಿಸಿದರು.

ಏಡೆನ್ ಮಾರ್ಕರಮ್ 25 ಹಾಗೂ ವೇಯ್ನ್ ಪಾರ್ನೆಲ್ 24 ರನ್ ಗಳಿಸಿ ತಂಡದ ಮೊತ್ತ 100ರ ಗಡಿ ದಾಟಲು ನೆರವಾದರು. ದಕ್ಷಿಣ ಆಫ್ರಿಕಾದ ನಾಲ್ವರು ಬ್ಯಾಟರ್‌ಗಳು ಶೂನ್ಯಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT