ಶನಿವಾರ, ಸೆಪ್ಟೆಂಬರ್ 25, 2021
29 °C

2ನೇ ಟಿ–20ಯಲ್ಲಿ ಭಾರತಕ್ಕೆ ಸೋಲು: ರೋಚಕತೆ ಪಡೆದ ಇಂದಿನ ಅಂತಿಮ ಪಂದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Twitter/@ICC

ಕೊಲಂಬೊ: ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಟೀಮ್‌ ಇಂಡಿಯಾ ಸೋಲನುಭವಿಸಿದೆ.

ಭಾರತ ನೀಡಿದ್ದ 133 ರನ್ ಗುರಿಯನ್ನು ಶ್ರೀಲಂಕಾ ತಂಡ  6 ವಿಕೆಟ್‌ ಕಳೆದುಕೊಂಡು, ಇನ್ನೂ ಎರಡು ಎಸೆತಗಳು ಬಾಕಿಯಿರುವಂತೆ ತಲುಪಿತು. ಶ್ರೀಲಂಕಾ ಪರ ಧನಂಜಯ ಡಿ ಸಿಲ್ವಾ ಔಟಾಗದೆ 40, ಮಿನೋದ್‌ ಭನುಕ 36 ರನ್‌ ಗಳಿಸಿದರು.

ಇಲ್ಲಿನ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 132 ರನ್‌ ಗಳಿಸಿತು. ಶ್ರೀಲಂಕಾದ ಸ್ಪಿನ್‌ ದಾಳಿಗೆ ಭಾರತದ ಬ್ಯಾಟ್ಸ್‌ಮನ್‌ಗಳು ರನ್‌ ಕಲೆ ಹಾಕಲು ಒದ್ದಾಟ ನಡೆಸಿದರು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಮ್‌ ಇಂಡಿಯಾ, ಎದುರಾಳಿಗೆ ತಂಡಕ್ಕೆ 133 ರನ್‌ಗಳ ಸಾಧಾರಣ ಗುರಿ ನೀಡಲಷ್ಟೇ ಶಕ್ತವಾಯಿತು. ಕೊರೊನಾ ವೈರಸ್‌ ಕಾರಣ ಪ್ರಮುಖ ಆಟಗಾರು ಭಾರತ ತಂಡದಲ್ಲಿ ಲಭ್ಯರಿಲ್ಲದ ಕಾರಣ ಬ್ಯಾಟಿಂಗ್‌ ವೈಫಲ್ಯ ಎದುರಿಸಿತು.

ಭಾರತದ ಪರ ನಾಯಕ ಶಿಖರ್‌ ಧವನ್ 42 ಎಸೆತಗಳಲ್ಲಿ 40 ರನ್‌ಗಳ ಕೊಡುಗೆ ನೀಡಿದರು. ಯುವ ಪ್ರತಿಭೆಗಳಾದ ದೇದದತ್ ಪಡಿಕ್ಕಲ್ 29, ಋತುರಾಜ್ ಗಾಯಕ್ವಾಡ್‌ 21 ಮತ್ತು ನಿತೀಶ್‌ ರಾಣಾ 9 ರನ್‌ ಗಳಿಸಲಷ್ಟೇ ಶಕ್ತರಾದರು.

ಮೂರು ಟಿ-20 ಪಂದ್ಯಗಳಲ್ಲಿ 1-1 ರಿಂದ ಸಮಬಲ ಸಾಧಿಸಿರುವ ಉಭಯ ತಂಡಗಳು ಗುರುವಾರ, ಜುಲೈ 29ರಂದು ನಡೆಯಲಿರುವ ಅಂತಿಮ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣೆಸಲಿವೆ. ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ಸಂಜೆ 8 ಗಂಟೆ 3ನೇ ಟಿ-20 ಪಂದ್ಯ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌
ಭಾರತ 132/5 (20)
ಶ್ರೀಲಂಕಾ 133/6 (19.4)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು