ಮಂಗಳವಾರ, ಆಗಸ್ಟ್ 9, 2022
23 °C
ಮಹಿಳಾ ಟಿ20: ಶ್ರೀಲಂಕಾ ಎದುರಿನ ಮೂರನೇ ಪಂದ್ಯ

ಮಹಿಳಾ ಟಿ20: ಶ್ರೀಲಂಕಾ ವಿರುದ್ಧ ಕ್ಲೀನ್‌ಸ್ವೀಪ್‌ನತ್ತ ಭಾರತದ ಚಿತ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದಂಬುಲಾ: ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಣ ಮೂರನೇ ಟಿ20 ಕ್ರಿಕೆಟ್‌ ಪಂದ್ಯ ಸೋಮವಾರ ಇಲ್ಲಿ ನಡೆಯಲಿದೆ.

ಮೊದಲೆರಡು ಪಂದ್ಯಗಳನ್ನು ಜಯಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಹರ್ಮನ್‌ಪ್ರೀತ್ ನಾಯಕತ್ವದ ಭಾರತ, ಈ ಹಣಾಹಣಿಯನ್ನೂ ಗೆದ್ದು ಸರಣಿ ಕ್ಲೀನ್‌ಸ್ವೀಪ್ ಮಾಡುವ ಉತ್ಸಾಹದಲ್ಲಿದೆ.

ಸರಣಿಯ ಮೊದಲ ಪಂದ್ಯದಲ್ಲಿ ಭಾರತ 34 ರನ್‌ಗಳಿಂದ ಆತಿಥೇಯ ತಂಡಕ್ಕೆ ಸೋಲುಣಿಸಿತ್ತು. ಎರಡನೇ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ತನ್ನದಾಗಿಸಿಕೊಂಡಿತ್ತು. ಎರಡೂ ಪಂದ್ಯಗಳಲ್ಲಿ ಬೌಲಿಂಗ್ ಪಡೆ ಉತ್ತಮವಾಗಿ ಆಡಿತ್ತು. ಬ್ಯಾಟಿಂಗ್‌ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.

ಭಾರತ ತಂಡದ ಫೀಲ್ಡಿಂಗ್ ಕೂಡ ಪರಿಣಾಮಕಾರಿಯಾಗಿರಲಿಲ್ಲ. ಈ ಕ್ಷೇತ್ರಗಳಲ್ಲಿ ತಂಡ ಸುಧಾರಣೆ ಕಾಣಬೇಕಿದೆ.

ಸತತ ಎರಡನೇ ಸರಣಿಯಲ್ಲಿ ವೈಟ್‌ವಾಶ್ ತಪ್ಪಿಸಿಕೊಳ್ಳಲು ಲಂಕಾ ಹೋರಾಡಲಿದೆ. ಈ ಹಿಂದಿನ ಸರಣಿಯಲ್ಲಿ ಆ ತಂಡವು ಪಾಕಿಸ್ತಾನ ಎದುರು 0–3ರಿಂದ ನಿರಾಸೆ ಅನುಭವಿಸಿತ್ತು.

ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು